ಸಖತ್ ಸದ್ದು ಮಾಡುತ್ತಿದೆ ವಿನೀಶ್ ದರ್ಶನ್ ಮಾಡಿರುವ ಈ ಚಾಲೆಂಜ್..!!

09 Jul 2019 5:35 PM | Entertainment
198 Report

ಸೋಷಿಯಲ್ ಮಿಡೀಯಾದಲ್ಲಿ ಸೆಲಬ್ರೆಟಿಗಳ ಚಾಲೆಂಜ್ ಜೋರಾಗಿಯೇ ನಡೆಯುತ್ತಿದೆ.. ಬಾಟಲ್ ಕ್ಯಾಪ್ ಚಾಲೆಂಜ್ ಸಖತ್ ಸದ್ದು ಮಾಡುತ್ತಿದೆ. ಈಗಾಗಲೇ ಸಾಕಷ್ಟು ಕಲಾವಿದರು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಇದೀಗ ಈ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರ ವಿನೀಶ್ ಸ್ವೀಕರಿಸಿ ಚಾಲೆಂಜ್‍ನಲ್ಲಿ ಗೆದ್ದಿದ್ದಾರೆ.ಇತ್ತೀಚೆಗೆ ದರ್ಶನ್ ಅವರ ಪುತ್ರ ವಿನೀಶ್ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ್ದಾರೆ. ಈ ಚಾಲೆಂಜ್ ಮಾಡಿ ವಿನೀಶ್ ಅವರು ಗೆದ್ದಿದ್ದಾರೆ. ವಿನೀಶ್ ಬಾಟಲ್ ಚಾಲೆಂಜ್ ಮಾಡಿದ ವಿಡಿಯೋವನ್ನು ಅವರ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಷೇರ್ ಮಾಡಿದ್ದಾರೆ.

ಬಾಟಲ್ ಕ್ಯಾಪ್ ಓಪನ್ ಚಾಲೆಂಗ್ ಸಖತ್ ಸದ್ದು ಮಾಡುತ್ತಿದ್ದು ಸೆಲಬ್ರೆಟಿಗಳಷ್ಟೆ ಅಲ್ಲದೆ ಸಾಮಾನ್ಯ ಜನರು ಕೂಡ ಇದನ್ನು ಮಾಡುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿ, ಬಾಟಲ್ ಕ್ಯಾಪ್ ಚಾಲೆಂಜ್, ವಿನೀಶ್ ಎಂದು ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋಗೆ ಇದುವರೆಗೂ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ ಸಾಕಷ್ಟು ರೀ-ಟೀಟ್ ಪಡೆದುಕೊಂಡಿದೆ. ದರ್ಶನ್ ಮಗ ಸ್ಟಾರ್ ಗಳಂತೆ ಬಾಟಲ್ ಚಾಲೆಂಜ್ ಮಾಡಿ ಮುಗಿಸಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೊದಲಿಗೆ ಈ ಬಾಟಲ್ ಕ್ಯಾಪ್ ಚಾಲೆಂಜ್ ಪ್ರಾರಂಭಿಸಿದ್ದರು. ಇದೀಗ ಸ್ಯಾಂಡಲ್‍ವುಡ್‍ಗೂ ಈ ಚಾಲೆಂಜ್ ಲಗ್ಗೆ ಇಟ್ಟಿದ್ದು, ನಟ ಅರ್ಜುನ್ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನಟಿ ರಚಿತಾ ರಾಮ್ ಈ ಚಾಲೆಂಜ್ ಸ್ವೀಕರಿಸಿ ಗೆದ್ದಿದ್ದರು. ಇನ್ನೂ ಯಾವ್ಯಾವ ರೀತಿ ಚಾಲೆಂಗ್ ಸೋಷಿಯಲ್ ಮಿಡೀಯಾದಲ್ಲಿ ಸದ್ದು ಮಾಡುತ್ತವೆ ಅನ್ನೋದನ್ನ ನೋಡಬೇಕಿದೆ.

Edited By

Manjula M

Reported By

Manjula M

Comments