ಡಿ ಬಾಸ್ ಗೆ ಸಿಕ್ತು ಮತ್ತೊಂದು ಹೊಸ ಬಿರುದು..!! ಕೊಟ್ಟಿದ್ದು ಯಾರ್ ಗೊತ್ತಾ..?

08 Jul 2019 1:06 PM | Entertainment
603 Report

ಸ್ಯಾಂಡಲ್ ವುಡ್ ನ ಸದ್ಯ ಬಹು ಬೇಡಿಕೆಯ ನಟ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ .. ಡಿ ಬಾಸ್ ಎಂದರೆ ಅಭಿಮಾನಿಗಳು ಸಖತ್ ಕ್ರೇಜ್... ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಾಕಷ್ಟು ಬಿರುದುಗಳಿವೆ. ಅಭಿಮಾನಿಗಳು ನೆಚ್ಚಿನ ನಟನ ಬಗ್ಗೆ ಆರಾಧನೆ ಮಾಡುತ್ತಲೇ ಇರುತ್ತಾರೆ.. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಸ್ಯಾಂಡಲ್ ವುಡ್ ನ ಏಕಚಕ್ರಾಧಿಪತಿ, ಬಾಕ್ಸ್ ಆಫೀಸ್ ಸುಲ್ತಾನ್ ಹೀಗೆ ಸಾಕಷ್ಟು ಹೆಸರುಗಳಿಂದ ದರ್ಶನ್ ಅವರನ್ನು ಅಭಿಮಾನಿಗಳು ಕರೆಯುತ್ತಾರೆ. ಈ ಬಿರುದುಗಳ ಜೊತೆಗೆ ಮತ್ತೊಂದು ಹೊಸ ಹೆಸರು ಇದೀಗ ಸೇರಿಕೊಂಡಿದೆ.

ಡಿ ಬಾಸ್ ಅವರನ್ನು ಅಭಿಮಾನಿಗಳು ತುಂಬಾ ಪ್ರೀತಿಸುತ್ತಾರೆ.. ಅಭಿಮಾನಿಗಳು ಎಷ್ಟು ಪ್ರೀತಿಸುತ್ತಾರೊ ಅಷ್ಟೆ ಪ್ರೀತಿ, ಗೌರವವನ್ನು ದರ್ಶನ್ ಅಭಿಮಾನಿಗಳಿಗೂ ಕೂಡ ನೀಡುತ್ತಾರೆ . ಎಲ್ಲಾ ಅಭಿಮಾನಿಗಳನ್ನು ಸಮಾನವಾಗಿ ಕಾಣುವ ದಚ್ಚು ಅಂದ್ರೆ ಅಭಿಮಾನಿಗಳಿಗೂ ಕೂಡ ಅಚ್ಚು ಮೆಚ್ಚು. ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದು ಕರೆದಿರುವ ದರ್ಶನ್ ಇತ್ತೀಚಿಗಷ್ಟೆ ಕುರುಕ್ಷೇತ್ರ ಚಿತ್ರದ ಆಡಿಯೋವನ್ನು ಅಭಿಮಾನಿಗಳ ಬಳಿ ರಿಲೀಸ್ ಮಾಡಿಸುವ ಮೂಲಕ ಅಭಿಮಾನಿಗಳ ಮೇಲಿನ ಪ್ರೀತಿ, ಗೌರವವನ್ನು ಮತ್ತೊಮ್ಮೆ ಸಬೀತು ಮಾಡಿದ್ರು. ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ಡಿ ಬಾಸ್ ಗೆ ಈಗ ಮತ್ತೊಂದು ಬಿರುದು ಸಿಕ್ಕಿದೆ ಅದೇ 'ಸುಲ್ತಾನ್ ಆಫ್ ಸ್ಯಾಂಡಲ್ ವುಡ್' ಈ ಬಿರುದನ್ನು ನೀಡಿದ್ದು ಅಭಿಮಾನಿಗಳಲ್ಲ. ಸ್ಯಾಂಡಲ್ ವುಡ್ ನ ಹಿರಿಯ ನಟಿ ತಾರಾ ಅನುರಾಧ. ಇತ್ತೀಚಿಗಷ್ಟೆ 'ಸಿಂಗ' ಚಿತ್ರದ ಆಡಿಯೋ ರಿಲೀಸ್ ಗೆ ದರ್ಶನ್ ಆಗಮಿಸಿದ್ರು. ಆ ಸಂದರ್ಭದಲ್ಲಿ ತಾರಾ ಅವರು ಈ ಮಾತನ್ನು ಹೇಳಿದ್ದಾರೆ. ಈ ಬಿರುದನ್ನು ಅಭಿಮಾನಿಗಳು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಹೀಗಿರುವ ಪಟ್ಟಿಗೆ ಮತ್ತೊಂದು ಬಿರುದು ಸೇರ್ಪಡೆಯಾಗಿದೆ. ಆಗಸ್ಟ್ 2 ಕ್ಕೆ ಕುರುಕ್ಷೇತ್ರ ಸಿನಿಮಾವು ಬಿಡುಗಡೆಯಾಗಲಿದೆ.

Edited By

Manjula M

Reported By

Manjula M

Comments