ಹಸ್ತಿನಾಪುರದ ಸುಯೋಧನನ ಹಾಡಿಗೆ ಡಿ ಬಾಸ್ ಫ್ಯಾನ್ಸ್ ಫುಲ್ ಫಿದಾ..!!

06 Jul 2019 2:41 PM | Entertainment
240 Report

ಚಂದನವನದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಸ್ಯಾಂಡಲ್‍ವುಡ್ ಸ್ಟಾರ್ ಗಳ ಬಾಕ್ಸ್ ಆಫೀಸ್ ಯುದ್ಧ ಇದೀಗ ನಿಂತಿದೆ.. ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರಗಳಾದ ‘ಮುನಿರತ್ನ ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್’ ಸಿನಿಮಾ ಒಂದೇ ದಿನ ತೆರೆ ಮೇಲೆ ಬರಲು ಸಿದ್ದವಾಗಿತ್ತು.ಸದ್ಯ ಬಿಡುಗಡೆಯ ದಿನಾಂಕವನ್ನು ಬದಲಿಸಲಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು ಸಖತ್ ರೆಸ್ಪಾನ್ಸ್ ಸಿಕ್ಕಿದೆ.ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ, ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ, ಗಾಯಕ ವಿಜಯ್ ಪ್ರಕಾಶ್ ಕಂಠದಾನ ಮಾಡಿದ್ದಾರೆ. ಬಹುತಾರಾಗಣದ ಪೌರಾಣಿಕ ತ್ರೀಡಿ ಸಿನಿಮಾವಾದ ಕುರುಕ್ಷೇತ್ರದಲ್ಲಿ ಬರುವ ಸುಯೋಧನನನ್ನ ಪರಿಚಯಿಸುವ ಹಾಡು ಇದಾಗಿದೆ. ದುರ್ಯೋಧನನಾಗುವ ಮುನ್ನ ಸುಯೋಧನನ ಪರಾಕ್ರಮ, ಬುದ್ಧಿವಂತಿಕೆಯ ಗುಣಗಾನ ಮಾಡಲಾಗಿದ್ದು, ದಚ್ಚು ಫ್ಯಾನ್ಸ್‌ ಫುಲ್ ಫಿದಾ ಆಗಿದ್ದಾರೆ. ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.. ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments