ರೆಡ್ ಸ್ವಿಮ್ ಸೂಟ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ‘ನವಗ್ರಹ’ ಬೆಡಗಿ

05 Jul 2019 2:22 PM | Entertainment
230 Report

ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಬಂದವರು ಒಂದೆರಡು ಸಿನಿಮಾ ಮಾಡಿ ಮರೆಯಾಗಿ ಬಿಡುತ್ತಾರೆ.. ಅದರಲ್ಲಿ ನಟಿ ಶರ್ಮಿಳಾ ಮಾಂಡ್ರೆ ಕೂಡ ಒಬ್ಬರು.. ಮಾಡಿದ್ದು ಒಂದೆರೆಡು ಸಿನಿಮಾ ಆದ್ರು ಕೂಡ ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಳ್ಳಲಿಲ್ಲ.. ಸಾಕಷ್ಟು ಜನರಿಗೆ ನಟಿ ಶರ್ಮಿಳಾ ಮಾಂಡ್ರೆ ಈಗ ಎಲ್ಲಿದ್ದಾರೆ ಎನ್ನುವ ಕುತೂಹಲ ಸಿನಿ ರಸಿಕರಲ್ಲಿ ಮೂಡಿರೋದಂತು ಸುಳ್ಳಲ್ಲ.. ನವಗ್ರಹದ ಈ ಬೆಡಗಿ ತೆರೆ ಮೇಲೆ ಕಾಣಿಸಿಕೊಂಡು ಸುಮಾರು ಎರಡು ವರ್ಷಗಳೇ ಕಳೆದಿವೆ.

ಶರ್ಮಿಳಾ ಮಾಂಡ್ರೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು. ತದ ನಂತರ ಶರ್ಮಿಳಾ ಮಾಂಡ್ರೆ ಯಾವ ಕನ್ನಡ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ.. ಸದ್ಯ ಶರ್ಮಿಳಾ ಮಾಂಡ್ರೆ ಇಂಡೋನೇಶಿಯಾ ಪ್ರವಾಸ ಮಾಡುತ್ತಿದ್ದಾರೆ. ಅಲ್ಲಿ ಸ್ವಿಮ್ ಸೂಟ್ ಧರಿಸಿ ಕ್ಯಾಮರಾಗೆ ಸಖತ್ ಗೆ ಪೋಸ್ ಕೊಟ್ಟಿದ್ದಾರೆ. ಕೆಂಪು ಬಣ್ಣದ ಕಾಸ್ಟ್ಯೂಮ್ ಧರಿಸಿರುವ ಶರ್ಮಿಳಾ ಮಾಂಡ್ರೆ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಮಾದಕ ಚೆಲುವೆಯ ಮೈಮಾಟ ಸಾಮಾಜಿಕ ಜಾಲತಾಣದಲ್ಲಿ ಸಖತ್  ವೈರಲ್ ಆಗಿದೆ. ಅಷ್ಟೆ ಅಲ್ಲದೆ ಸಾಮಾಜಿಕ ಬಳಕೆದಾರರು ಸಿಕ್ಕಾಪಟ್ಟೆ ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಶರ್ಮಿಳಾ ಮಾಂಡ್ರೆ ಗಾಳಿಪಟ-2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.  

Edited By

Manjula M

Reported By

Manjula M

Comments