ತುಂಬು ಗರ್ಭಿಣಿಯ ಅಂಡರ್‌ವಾಟರ್ ಫೋಟೋಶೂಟ್.. !! ಸುದೀಪ್ ನಾಯಕಿಯ ಪೋಟೋ  ವೈರಲ್..!!!

05 Jul 2019 12:14 PM | Entertainment
1119 Report

ಸೆಲೆಬ್ರೆಟಿಗಳು ಏನು ಮಾಡಿದರೂ ಸುದ್ದಿಯಾಗುತ್ತಲೆ ಇರುತ್ತಾರೆ. ಇದೀಗ ಬಹುಭಾಷಾ ನಟಿ ತಮ್ಮ ಪೋಟೋಶೂಟ್’ನಿಂದಾಗಿ ಟ್ರೋಲ್ ಆಗಿದ್ದಾರೆ. ಬಹುಭಾಷಾ ನಟಿ ಸಮೀರಾ ರೆಡ್ಡಿ ಇತ್ತಿಚಿಗಷ್ಟೆ ತನ್ನ ಗರ್ಭಿಣಿ ಪೋಟೋವನ್ನು ಹಂಚಿಕೊಂಡಿದ್ದರು. ಆ ಪೋಟೋವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಇದೀಗ ತುಂಬು ಗರ್ಭಿಣಿಯಾಗಿದ್ದು, ಅವರು ಈಗ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಮೀರಾರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲು ಪ್ರಾರಂಭ ಮಾಡಿದ್ದಾರೆ.

ಇತ್ತೀಚೆಗೆ ಸಮೀರಾ ರೆಡ್ಡಿ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ತನ್ನ ಇನ್‍ಸ್ಟಾಗ್ರಾಂನಲ್ಲಿ ಷೇರ್ ಮಾಡಿದ್ದಾರೆ.  ಈ ಫೋಟೋಶೂಟನ್ನು ಪ್ರೇರಣಾ ಬೇಯೋಸ್ ಅವರಿಂದ ಮಾಡಿಸಿದ್ದಾರೆ, ಸಮೀರಾ ಅಂಡರ್‌ವಾಟರ್ ಫೋಟೋಶೂಟ್‍ನ ಮುಖಾಂತರ ತಮ್ಮ ಅನುಭವವನ್ನು ಷೇರ್ ಮಾಡಿದ್ದಾರೆ.. ಈ ಬಗ್ಗೆ ಮಾತನಾಡಿದ ಸಮೀರಾ, ನಾನು ಈ ಫೋಟೋಶೂಟ್ ಮಾಡಿಸುವಾಗ ತುಂಬಾ ಖುಷಿಯಾಗಿದ್ದೆ.. ನಾನು ನನ್ನ ಜೀವನ ವೃತ್ತಿಯಲ್ಲಿ ಮಾಡಿಸಿದ ರೋಮಾಂಚಕ ಫೋಟೋಶೂಟ್‍ಗಳಲ್ಲಿ ಇದು ಕೂಡ ಒಂದು ಎಂದು ಸಂತಸ ಪಟ್ಟಿದ್ದಾರೆ. ಅಷ್ಟೆ ಅಲ್ಲದೆ ಕೆಲವು ಅಭಿಮಾನಿಗಳು, ಗರ್ಭಿಣಿಯಾಗಿರುವ ಸಮಯದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಹೇಗೆ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ.

 

Edited By

Manjula M

Reported By

Manjula M

Comments