ರಾಕಿಂಗ್ ಸ್ಟಾರ್ ಯಶ್ ಗೆ ಸ್ಯಾಂಡಲ್ವುಡ್ ಸಿಂಡ್ರೆಲಾ ಇಟ್ಟ ನಿಕ್ ನೇಮ್ ಏನ್ ಗೊತ್ತಾ..?

03 Jul 2019 11:34 AM | Entertainment
240 Report

ಸ್ಯಾಂಡಲ್ ವುಡ್ ನಲ್ಲಿ ರಾಕಿಂಗ್ ಸ್ಟಾರ್ ಸದ್ಯ ಬಹುಬೇಡಿಕೆಯ ನಟರಾಗಿದ್ದಾರೆ. ಯಶ್ ಅಭಿನಯದ ಕೆಜಿಎಫ್ ಸಿನಿಮಾ ಚಂದನವನದಲ್ಲಿ ಅಷ್ಟೆ ಅಲ್ಲದೆ ಪರಭಾಷೆಗಳಲ್ಲಿಯೂ ಕೂಡ ಧೂಳ್ ಎಬ್ಬಿಸಿತ್ತು.. ಆ ಸಿನಿಮಾದಿಂದಲೇ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿಬಿಟ್ಟರು… ಯಶ್ ಸದ್ಯ ಖುಷಿಯಲ್ಲಿದ್ದಾರೆ.. ಕೆಜಿಎಫ್ 1 ಸಿನಿಮಾ  ಸಕ್ಸಸ್ ನ ಜೊತೆಗೆ ಮಗಳು ಹುಟ್ಟಿದ ಸಂಭ್ರಮದಲ್ಲಿದ್ದ ಯಶ್ ಬಂದಿದ್ದಾಳೆ ಇತ್ತಿಚೇಗೆ ಮಗುವಿಗೆ ನಾಮಕರಣ ಕೂಡ ಮಾಡಿದ್ದಾರೆ. ಹೆಣ್ಣು ಮಕ್ಕಳೆಂದರೆ ಯಶ್ ಇಷ್ಟವಂತೆ.. ಇದೀಗ ಮಗಳಿಗೆ ಐರಾ ಯಶ್ ಎಂದು ನಾಮಕರಣ ಮಾಡಿದ್ದಾರೆ.

ಇನ್ನೂ ಕೆಜಿಎಪ್ 2 ಚಿತ್ರಿಕರಣ ಪ್ರಾರಂಭವಾಗಿದೆ.ಆ ಖುಷಿಯಲ್ಲಿಯೂ ಕೂಡ ಯಶ್ ಇದ್ದಾರೆ. ರಾಧಿಕಾ ಪಂಡಿತ್ ಅವರು ಎರಡನೇ ಬಾರಿ ಗರ್ಭಿಣಿಯಾಗಿರುವ ಬಗ್ಗೆ ಯಶ್ ಅವ್ರೆ ಐರಾ ಯಶ್ ಅವರ ವಿಡಿಯೋವೊಂದನ್ನ ಹಾಕಿ ಯಶ್ ತಮ್ಮ ಸಂತೋಷವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ, ಸ್ಯಾಂಡಲ್ವುಡ್ ನ ಸಿಂಡ್ರೆಲಾ ಇದೀಗ ಎರಡನೇ ಬಾರಿ ಗರ್ಭಿಣಿಯಾಗಿದ್ದಾರೆ,ರಾಧಿಕಾ ಗೆ ಗಂಡು ಮಗುವೆಂದರೆ ಇಷ್ಟವಂತೆ. ಆದಿ ಲಕ್ಷ್ಮಿಪುರಾಣ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಜಿಯಾಗಿರುವ ರಾಧಿಕಾ ಯಶ್ ಅವರ ನಿಕ್ ನೆಮ್ ಒಂದನ್ನ ರೀವಿಲ್ ಮಾಡಿದ್ದಾರೆ,ರಾಧಿಕಾ ಯಶ್ ಅವರಿಗೆ”ಡೋಲ್ಲ”ಎಂದು ಕರೆಯುತ್ತಾರಂತೆ,ಡೋಲ್ಲ ಅಂದರೆ ಕೊಂಕಣಿಯಲ್ಲಿ ದಪ್ಪ ಎಂದರ್ಥವಂತೆ,ರಾಧಿಕಾ ಅವರೆ ಈ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.ಒಟ್ಟಾರೆಯಾಗಿ ಯಶ್ ಫುಲ್ ಖುಷಿಯಲ್ಲಿದ್ದಾರೆ. ಮತ್ತೊಬ್ಬ ಅಧಿತಿ ಆಗಮನಕ್ಕಾಗಿ ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments