ದರ್ಶನ್ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಾಡುದ್ರಾ..!!! ಯಾರು ಆ ಸೆಲಬ್ರೆಟಿ..?

ಸ್ಯಾಂಡಲ್ ವುಡ್ ನಲ್ಲಿ ಕೆಲವೊಂದು ಸುದ್ದಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ... ಇದೀಗ ಮತ್ತೊಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.. ಅದು ಬಾಕ್ಸ್'ಆಪೀಸ್ ನ ಸುಲ್ತಾನ, ಸ್ಯಾಂಡಲ್ ವುಡ್'ನ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಮತ್ತೊಬ್ಬ ಸೆಲಬ್ರಿಟಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ದರ್ಶನ್ ಅವರು ಮಾಡಿರುವ ಈ ಟ್ವೀಟ್ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ.
ಸೆಲಬ್ರೆಟಿಗಳು ಚಾಲೆಂಜ್ ಮಾಡುವುದು ಕಾಮನ್... ಆದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿರುವ ಟ್ವೀಟ್ ಭಾರೀ ಕುತೂಹಲವನ್ನು ಕೆರಳಿಸಿದೆ. ದರ್ಶನ್ ಅವರೇ ಬೇರೆ ನಟರಿಗೆ ಚಾಲೆಂಜ್ ಮಾಡಲಿದ್ದಾರಾ..? ಎಂಬ ಪ್ರಶ್ನೆಗಳು ಎಲ್ಲರಲ್ಲಿಯೂ ಮೂಡಿದೆ. ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ. ದರ್ಶನ್ ತಮ್ಮ ಟ್ವೀಟರ್'ನಲ್ಲಿ ಒಬ್ಬ ಸೆಲೆಬ್ರೆಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ ಬುಕ್ ಲೈವ್ ಬರ್ತಿನಿ ಬಂದಾಗ ಎಲ್ಲಾನು ತಿಳಿಸುತ್ತೇನೆ. ನಿಮ್ಮ ದಾಸ ದರ್ಶನ್ ಎಂದು ಬರೆದು ಡಿ ಬಾಸ್ ತಮ್ಮ ಅಧಿಕೃತ ಟ್ವೀಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಎಲ್ಲಾ ಅಭಿಮಾನಿಗಳು ದರ್ಶನ್ ಯಾರಿಗೆ ಚಾಲೆಂಜ್ ಹಾಕುತ್ತಾರೆ, ಏನಂತ ಚಾಲೆಂಜ್ ಹಾಕುತ್ತಾರೆ ಕಾಯುತ್ತಿದ್ದಾರೆ..ಇದಕ್ಕೆಲ್ಲಾ ಇಂದು ಮದ್ಯಾಹ್ನ ಉತ್ತರ ಸಿಗಲಿದೆ.
Comments