ಪುನೀತ್ ರಾಜ್ ಕುಮಾರ್ ಮಗಳು ತೆಗೆದುಕೊಂಡ ಮಹತ್ತರ ನಿರ್ಧಾರ ಏನ್ ಗೊತ್ತಾ..?

21 Jun 2019 2:42 PM | Entertainment
222 Report

ಸೆಲಬ್ರೆಟಿಗಳು ಸುದ್ದಿಯಾಗೋದು ಕಾಮನ್, ಆದರೆ ಅವರ ಮಕ್ಕಳು ಕೂಡ ಸಖತ್ ಸುದ್ದಿಯಾಗಿ ಫೇಮಸ್ ಆಗುತ್ತಿದ್ದಾರೆ. ಸಾಮಾನ್ಯವಾಗಿ ಸಾಕಷ್ಟು ಹೀರೋ ಹೀರೋಹಿನ್ ಮಕ್ಕಳು ಕೂಡ ಬಣ್ಣದ ಲೋಕಕ್ಕೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರೂ ಅಂದುಕೊಳ್ಳುವುದು ಕಾಮನ್ ಬಣ್ಣದ ಸ್ಟಾರ್ಸ್ ಗಳ ಮಕ್ಕಳು ಸ್ಟಾರ್ಸ್ಗಳೇ ಆಗೋದು ಅಂತಾ.. ಹೌದು ಅಣ್ಣಾವ್ರ ಕುಟುಂಬದಲ್ಲಿ ಕೂಡ ಆಗಿರೋದು ಅದೇ... ಈಗಾಗಲೇ ರಾಘವೇಂದ್ರ ರಾಜ್ ಕುಮಾರ್ ಮಗ ಹೀರೋ ಆಗಿದ್ದಾರೆ.. ಇದೀಗ ಪುನೀತ್ ರಾಜ್ ಕುಮಾರ್ ಮಗಳು ಕೂಡ ಮಹತ್ತರವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ..

ಸ್ಯಾಂಡಲ್‌ವುಡ್ ಪವರ್ ಮ್ಯಾನ್ ಪುನೀತ್ ರಾಜ್ ಕುಮಾರ್ ಹಿರಿಯ ಪುತ್ರಿ ದೃತಿ ಪುನೀತ್ ರಾಜ್‌ಕುಮಾರ್ ಚಿಕ್ಕ ವಯಸ್ಸಿನಲ್ಲೇ ಮಹತ್ತರವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅಪ್ಪನಂತೆ ಸಿನಿಮಾ ರಂಗಕ್ಕೋ ಅಥವಾ ಅಮ್ಮನಂತೆ ನಿರ್ಮಾಪಕಿಯಾಗಲು ಕೂಡ ಹೊರಟಿಲ್ಲ. ಸದ್ಯ ದೃತಿ ಬದಲಾಗಿ ಸಮಾಜ ಸೇವೆಗೆ ಮುಂದಾಗಿದ್ದಾರೆ. ಡಾ. ರಾಜ್ ಕುಮಾರ್ ಯಾವಾಗಲೂ ಹೇಳುತ್ತಿದ್ದರು ನೇತ್ರದಾನ ಮಹಾದಾನ ಎಂದು.. ಆ ಮಹಾಕಾರ್ಯಕ್ಕೆ ಇದೀಗ ರಾಜ್ ಕುಮಾರ್ ಮೊಮ್ಮಗಳು ಮುಂದಾಗಿದ್ದಾಳೆ. ಕಣ್ಣಿನ ಸಮಸ್ಯೆ ಎದುರಾದ ವಯಸ್ಸಾದವರಿಗೆ ನೆರವು ನೀಡಲು ಅಭಿಯಾನವನ್ನು ಶುರು ಮಾಡಿದ್ದಾರೆ. ಇಲ್ಲಿ ಯಾರು ಬೇಕಾದರೂ ಹಣ ಸಹಾಯ ಮಾಡಬಹುದು. ಅದನ್ನು ಕಣ್ಣಿನ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ದೃತಿ ಭರಿಸಲಿದ್ದಾರೆ.ಒಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಸೇವೆಗೆ ಮುಂದಾಗಿರುವುದು ನಿಜಕ್ಕೂ ಕೂಡ ಒಳ್ಳೆಯ ಕಾರ್ಯವೇ

Edited By

Manjula M

Reported By

Manjula M

Comments