ಸ್ವತಃ ವಿಮಾನವನ್ನು ಓಡಿಸುವ ಭಾರತದ ಏಕೈಕ ಕನ್ನಡದ ನಟಿ..!!

20 Jun 2019 12:12 PM | Entertainment
367 Report

ಹೆಣ್ಣು ಮಕ್ಕಳು ಯಾವುದರಲ್ಲೂ ಕೂಡ ಕಡಿಮೆ ಇಲ್ಲ ಎಂಬುದನ್ನು ಸಾಕಷ್ಟು ಬಾರಿ ಸಾಬೀತು ಪಡಿಸಿದ್ದಾರೆ. ಪುರುಷನ ಸರಿ ಸಮಾನವಾಗಿಯೇ ನಿಂತೂ ಎಲ್ಲ ಕೆಲಸಗಳನ್ನು ಮಾಡುತ್ತಾಳೆ.. ನಾಲ್ಕು ಗೋಡೆಯ ಮದ್ಯೆ ಇದ್ದ ನಾರಿಯರು ಇದೀಗ ನಾಲ್ಕು ದಿಕ್ಕುಗಳಲ್ಲಿಯೂ ಕೂಡ ಕೆಲಸ ಮಾಡುತ್ತಾರೆ.. ಅಷ್ಟಕ್ಕೂ ಯಾಕ್ ಈ ಪೀಠಿಕೆ ಅಂತೀರಾ.. ಹೆಣ್ಣು ಮಕ್ಕಳು ಪೈಲೆಟ್ ಆಗಿಯೂ ಕೂಡ ಕೆಲಸ ಮಾಡುತ್ತಿದ್ದಾರೆ. ಆದರೆ ಚಿತ್ರನಟಿಯೊಬ್ಬಳು  ವಿಮಾನವನ್ನು ಸ್ವತಃ ಅವರೇ ಓಡಿಸುತ್ತಾರೆ. ಭಾರತದಲ್ಲೇ ವಿಮಾನವನ್ನು ಓಡಿಸುವ ಏಕೈಕ ನಟಿಯೂ ಕೂಡ ಇವರೇ.

ವಿಮಾನ ಓಡಿಸುವುದು ಸಣ್ಣ ಸುಲಭ ಕೆಲಸವಲ್ಲ ಅದಕ್ಕೆ ವಿಶೇಷ ತರಬೇತಿ ಬೇಕಾಗುತ್ತದೆ, ಆಕೆ ಮತ್ಯಾರು ಅಲ್ಲ.. ಅವರೇ ಮಾಧವಿ ಶರ್ಮಾ… ಡಾ. ರಾಜ್ ಕುಮಾರ್ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಉದ್ಯಮಿಗಳ ಹತ್ತಿರ ಅವರದ್ದೇ ಸ್ವಂತ ವಿಮಾನಗಳಿರುತ್ತವೆ ಹೀಗೆ ಮಾಧವಿ ಅವರ ಬಳಿಯು ಒಂದು ಖಾಸಗಿ ವಿಮಾನವಿದ್ದು ಎಲ್ಲಾದರೂ ಅಗತ್ಯವಿದ್ದಾಗ ತಮ್ಮ ವಿಮಾನವನ್ನು ತಾವೇ ಓಡಿಸುತ್ತಾರೆ.ಇದು ಭಾರತದಲ್ಲಿ ವಿಮಾನ ಓಡಿಸುವ ಒಬ್ಬೇ ಒಬ್ಬ ನಟಿ ಕೂಡಾ ಹೌದು. ನಟಿಯರು ಕೇಲವ ಸಿನಿಮಾ ಅನ್ನೋದನ್ನ ಬಿಟ್ಟು ತಮ್ಮನ್ನ ತಾವು ಈ ರೀತಿಯ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಕು… ಮಾದವಿ ಕನ್ನಡದಲ್ಲಿ ಅಭಿನಯಿಸಿ ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದಿಸಿಕೊಂಡಿದ್ದರು.

 

Edited By

Manjula M

Reported By

Manjula M

Comments