'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ  ಈ ವಾರದ ಗೆಸ್ಟ್ ಯಾರು ಗೊತ್ತಾ..?

20 Jun 2019 9:32 AM | Entertainment
1521 Report

ಕಿರುತೆರೆಯ ಜನಪ್ರಿಯ ಷೋಗಳಲ್ಲಿ ವೀಕೆಂಡ್ ವಿಥ್ ರಮೇಶ್ ಸಾಕಷ್ಟು ಹೆಸರನ್ನು ಮಾಡಿದೆ… ತನ್ನದೇ ಆದ ಅಭಿಮಾನಿ ಬಳಗವನ್ನು ಈ  ಕಟ್ಟಿಕೊಂಡಿದೆ.. ಈಗಾಗಲೇ ಮೂರು ಸೀಜನ್ ಗಳನ್ನು ಮುಗಿಸಿದೆ.. ಇದೀಗ ನಾಲ್ಕನೇ ಸೀಜನ್ ನಡೆಯುತ್ತದೆ.. ಆದರೆ ಅಭಿಮಾನಿಗಳು ನಾಲ್ಕನೇ ಸೀಜನ್ ಅನ್ನು ಹೊಗಳಿದ್ದಕ್ಕಿಂತ ತೆಗಳಿದ್ದೆ ಜಾಸ್ತಿಯಾಗಿತು..ಮೊದಲ ಸಂಚಿಕೆಯಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರು ಬಂದಿದ್ದು ಬಿಟ್ಟರೆ ಬೇರೆಲ್ಲಾ ಎಪಿಸೋಡ್ ಗಳ ಬಗ್ಗೆ ನೆಗೆಟಿವ್ ಕಮೆಂಟ್ ಗಳೇ ಬಂದವು..ಆದರೆ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರ ಕಾರ್ಯಕ್ರಮಕ್ಕೆ ಮೆಚ್ಚುಗೆಯ ಸುರಿಮಳೆಯೇ ಸುರಿದವು.

ಈ ಬಾರಿ ವೀಕೆಂಡ್ ವಿತ್ ರಮೇಶ್ ಷೋ ಗೆ ಯಾರು ಬಂದಿದ್ದಾರೆ ಗೊತ್ತಾ… ಜನಪ್ರಿಯ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್'ನಲ್ಲಿ ಜನಪ್ರಿಯ ನಟ ಚಿಕ್ಕಣ್ಣ ಭಾಗವಹಿಸಲಿದ್ದಾರೆ. 'ವೀಕೆಂಡ್ ವಿತ್ ರಮೇಶ್' ಸೀಸನ್ 4 ರಲ್ಲಿ ಕಳೆದ ವಾರ 'ಅಧ್ಯಕ್ಷ' ಶರಣ್ ಬಂದಿದ್ದರು. ಈ ವಾರ ಉಪಾಧ್ಯಕ್ಷ ಚಿಕ್ಕಣ್ಣ ಕೂಡ ಸಾಧಕರ ಸೀಟ್ ನಲ್ಲಿ ಕುಳಿತುಕೊಳ್ಳಲಿದ್ದಾರೆ. ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದ ಚಿಕ್ಕಣ್ಣ 'ಕಿರಾತಕ' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, 'ಅಧ್ಯಕ್ಷ', 'ರಾಜಾಹುಲಿ', 'ರನ್ನ', 'ರಾಜಕುಮಾರ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.. ನಾಯಕನಟರಿಗಿಂತ ಹೆಚ್ಚಾಗಿಯೇ ಬ್ಯುಸಿಯಾಗಿರುತ್ತಾರೆ. ಎಲ್ಲ ಸಿನಿಮಾಗಳಲ್ಲಿಯೂ ಕೂಡ ಚಿಕ್ಕಣ್ಣನ ಕಾಮಿಡಿ ಇದ್ದೆ ಇರುತ್ತದೆ.  ಈ ವಾರ ಚಿಕ್ಕಣ್ಣ ನ ಕಾಮಿಡಿ ಜೊತೆಗೆ ಅವರ ಜೀವನದ ಹಾದಿಯನ್ನು ಕೂಡ ಕಣ್ತುಂಬಿಕೊಳ್ಳಬಹುದು.

Edited By

Manjula M

Reported By

Manjula M

Comments