ಪೂರ್ತಿ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡ ಸುದೀಪ್ ನಾಯಕಿ ಅಮಲಾ ಪೌಲ್..!!

19 Jun 2019 1:10 PM | Entertainment
535 Report

ಸೆಲಬ್ರೆಟಿಗಳು ಆಗಿಂದಾಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುತ್ತಾರೆ.. ಅದರಲ್ಲೂ ನಟಿಯರಂತೂ ತಮ್ಮ ಉಡುಗೆ ತೊಡುಗೆಗಳ ಮೂಲಕವೇ ಸಖತ್ ಸುದ್ದಿಯಾಗಿ ಬಿಡುತ್ತಾರೆ. ಕೆಲವು ನಟಿಯರು ಬಿಕಿನಿ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾ ಟ್ರೋಲ್ ಆಗಿ ಸುದ್ದಿಯಾಗುತ್ತಾರೆ. ಇನ್ನೂ ಕೆಲವರು ತಮ್ಮ ತಮ್ಮ ಬೆತ್ತಲೆ ಪೋಟೋಗಳನ್ನು ಹಾಕಿ ಸುದ್ದಿಯಾಗುತ್ತಾರೆ.. ಇದೀಗ ಬಹುಭಾಷ ನಟಿ ಅಮಲಾ ಪೌಲ್ ಸುದ್ದಿಯಾಗಿದ್ದಾರೆ.

ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ ‘ಅದಾಯಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕರಾದ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತಾಯಿ ತನ್ನ ಕಾಣೆಯಾದ ಮಗಳನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ಇಲ್ಲಿಂದ ಶುರುವಾಗುವ ಈ ಟೀಸರ್ ಕೊನೆಯಲ್ಲಿ ಪ್ರತ್ಯೇಕ ಬಹುಮಹಡಿ ಕಟ್ಟಡದಲ್ಲಿ ಅಮಲಾ ಸಂಪೂರ್ಣವಾಗಿ ನಗ್ನಳಾಗಿ ಏಳುವ ದೃಶ್ಯದೊಂದಿಗೆ ಕೊನೆ ಆಗಿದೆ. ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಅಮಲ ಪೌಲ್.. ಹೀಗಾಗಿ ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.. ಸಿನಿಮಾದ ಟೀಸರ್ ಇಷ್ಟು ಸದ್ದು ಮಾಡಿದೆ. ಇನ್ನೂ ಸಿನಿಮಾ ಯಾವ ರೀತಿಯ ಸದ್ದು ಮಾಡುತ್ತದೆ ಎಂಬುದನ್ನು ಕಾದು ನೊಡಬೇಕಿದೆ.  

Edited By

Manjula M

Reported By

Manjula M

Comments