ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ವಿಜಯ್ ಸೂರ್ಯ..!!

19 Jun 2019 11:35 AM | Entertainment
255 Report

ಕಿರುತೆರೆಯಲ್ಲಿ ಪ್ರಸಾರವಾಗುವ ಧಾರವಾಹಿಯ ಕೆಲವೊಂದು ಪಾತ್ರಗಳು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿ ಬಿಡುತ್ತವೆ.. ಅದರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರವಾಹಿಯ ಸಿದ್ಧಾರ್ಥ್ ಪಾತ್ರವೂ ಕೂಡ ಒಂದು.. ಅಭಿಮಾನಿಗಳು ಅಗ್ನಿಸಾಕ್ಷಿಯ ವಿಜಯ್ ಸೂರ್ಯ ಅಲಿಯಾಸ್ ಸಿದ್ಧಾರ್ಥ್ ಅನ್ನು ಮೆಚ್ಚಿಕೊಂಡಿದ್ದರು.. ಒರೋಬ್ಬರಿ 5 ವರ್ಷಗಳಿಂದ ಧಾರವಾಹಿಯು ಪ್ರಸಾರವಾಗುತ್ತಿತ್ತು.. ಇದೀಗ ಇತ್ತಿಚಿಗಷ್ಟೆ ಸಿದ್ಧಾರ್ಥ್ ಅಗ್ನಿಸಾಕ್ಷಿ ಧಾರವಾಹಿಯಿಂದ ಹೊರಬಂದಿದ್ದಾರೆ.  

ನಟ ವಿಜಯ್ ಸೂರ್ಯ ಇತ್ತೀಚಿಗಷ್ಟೆ 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರಬರುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದರು.. ಇನ್ನು ಮುಂದೆ ವಿಜಯ್ ಧಾರವಾಹಿಯಲ್ಲಿ ಕಾಣಿಸಿವುದಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು. ಅಷ್ಟೆ ಅಲ್ಲದೆ ಇನ್ಮುಂದೆ ವಿಜಯ್ ಏನ್ಮಾಡ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕೂಡ ಕಾಡುತ್ತಿತ್ತು. ಆದರೆ ಇದೀಗ ವಿಜಯ್ ಕಡೆಯಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ವಿಜಯ್ ಹೊಸ ಧಾರಾವಾಹಿಯ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಿದ್ದರಾಗುತ್ತಿದ್ದಾರೆ.  ವಿಜಯ್ ಸೂರ್ಯ ಇನ್ಮುಂದೆ 'ಪ್ರೇಮಲೋಕ' ಎನ್ನುವ ಹೊಸ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೆ ಲವರ್ ಬಾಯ್ ಆಗಿ ಕಿರುತೆರೆ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಆದರೆ ಬೇರೆ ವಾಹಿನಿಯಲ್ಲಿ 'ಪ್ರೇಮಲೋಕ' ಧಾರಾವಾಹಿ ಪ್ರಸಾರವಾಗಲಿದೆ. ಸಾಕಷ್ಟು ಧಾರಾವಾಹಿಗಳಿಗೆ ಆಫರ್ ಬಂದರು ವಿಜಯ್ ಇದೆ ಧಾರಾವಾಹಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾರಣ ವಿಜಯ್ ಗೆ ತುಂಬಾ ಇಷ್ಟವಾಗಿದೆಯಂತೆ. ಒಟ್ಟಾರೆಯಾಗಿ ವಿಜಯ್ ಅಭಿಮಾನಿಗಳ ಮುಂದೆ ಮತ್ತೆ ಲವ್ವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

Edited By

Manjula M

Reported By

Manjula M

Comments