‘ನಾನೇನು ಪಬ್ಲಿಕ್ ಪ್ರಾಪರ್ಟಿ ಅಲ್ಲ’ ಎಂದ ಸ್ಯಾಂಡಲ್ ವುಡ್ ನಟಿ..!!

18 Jun 2019 3:39 PM | Entertainment
657 Report

ಇತ್ತಿಚಿಗೆ ಸೆಲಬ್ರೆಟಿಗಳು ಸಖತ್ ಸುದ್ದಿಯಾಗುತ್ತಿದ್ದಾರೆ.. ಬಣ್ಣದ ಜಗತ್ತಿನಲ್ಲಿ ಟ್ರೋಲ್ ಆಗುವವರೆ ಹೆಚ್ಚು.. ಇದೀಗ ಸ್ಯಾಂಡಲ್ ವುಡ್ ನ ನಟಿಯೊಬ್ಬಳು ಕೂಡ ಟ್ರೋಲ್ ಆಗಿ ಸಖತ್ ಹವಾ ಕ್ರಿಯೆಟ್ ಮಾಡುತ್ತಿದ್ದಾರೆ.. ಮಾಡೆಲಿಂಗ್ ಮಾಡುತ್ತಲೇ ಸ್ಯಾಂಡಲ್’ವುಡ್ ನಲ್ಲಿ ನಟಿಯಾಗಿ ಎಂಟ್ರಿ ಕೊಟ್ಟ ಕೊಡಗಿನ ಕುವರಿ ಶುಭ್ರಾ ಅಯ್ಯಪ್ಪ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದ್ದಾರೆ..  ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೋಲ್ಡ್​ ಹಾಗೂ ಹಾಟ್​ ಫೋಟೊಶೂಟ್​ಗಳಿಂದಲೇ ಅತಿ ಹೆಚ್ಚು ಸುದ್ದಿಯಲ್ಲಿರುವ ನಟಿ ಶುಭ್ರಾ ಅಯ್ಯಪ್ಪ..

ಇತ್ತೀಚಿಗಷ್ಟೆ ಫ್ಯಾಮಿಲಿಯೊಂದಿಗೆ ವಿದೇಶಿ ಪ್ರವಾಸದಲ್ಲಿರುವ ಈಕೆ ಸಖತ್ ಎಂಜಾಯ್ ಮಾಡುತ್ತಿದ್ಧಾಳೆ. ಅದರಲ್ಲೂ ಅವರು ಮಾಡಿರುವ ಸ್ಕೈ ಡೈವಿಂಗ್​ ವಿಡಿಯೋ ಸಖತ್​ ಸುದ್ದಿ ಮಾಡಿದೆ. ಅದಕ್ಕೂ ಮೊದಲು ಅವರು ಬೋಟಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಅದು ಅವರು ಬೋಟಿಂಗ್ ಮಾಡುವಾಗ ತೊಟ್ಟಿದ್ದ ಬಿಕಿನಿಯಿಂದಾಗಿ. ಅವರು ತೊಟ್ಟಿದ್ದ ಬಿಕಿನಿಯಿಂದಾಗಿ ಶುಭ್ರಾ ಟ್ರೋಲ್ ಗೆ ಒಳಗಾಗಿದ್ದಾರೆ. ಈ ಸುದ್ದಿ ತಣ್ಣಗಾಗುತ್ತಿದ್ಧಂತೆಯೇ ಈಗ ಮತ್ತೊಂದು ವಿಷಯಕ್ಕೆ ಈಕೆ ಸಖತ್ ಸದ್ದು ಮಾಡುತ್ತಿದ್ದಾರೆ. 'ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಿಕಿನಿ ಫೋಟೊಗಳನ್ನು ಬದಲಾಯಿಸಿ ತಮಗೆ ಬೇಕಾದಂತೆ ಕಮೆಂಟ್ ಮಾಡ್ತಿದ್ದಾರೆ. ಬಿಕಿನಿ ಹಾಕಿಕೊಂಡು ನಾನೇನು ಬೀದಿಗೆ ಬಂದಿಲ್ಲ. ನಾನೊಬ್ಬ ಮಾಡೆಲ್, ನನಗೆ ಅಷ್ಟೂ ಸ್ವಾತಂತ್ರ್ಯ ಇಲ್ಲವೆ ? ಸಿಕ್ಕ ಸಿಕ್ಕ ಆಗೆ ಟ್ರೋಲ್ ಮಾಡಲು ನಾನೇನು ಪಬ್ಲಿಕ್ ಪ್ರಾಪರ್ಟಿ ಅಲ್ಲ ಎಂದಿದ್ದಾರೆ.

Edited By

Manjula M

Reported By

Manjula M

Comments