ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ನೀರ್ ದೋಸೆ ಬೆಡಗಿ ಹರಿಪ್ರಿಯಾ..!! ಕಾರಣ ಏನ್ ಗೊತ್ತಾ..?

18 Jun 2019 11:59 AM | Entertainment
727 Report

ಸ್ಯಾಂಡಲ್’ವುಡ್ ನಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಹರಿಪ್ರಿಯಾ ಕೂಡ ಒಬ್ಬರು… ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡ ಈಕೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ  ಜೊತೆ ನಟಿಸಿದ್ದಾರೆ.. ಇತ್ತಿಚಿಗಂತೂ ಹರಿಪ್ರಿಯಾ ಸಖತ್ ಬ್ಯುಸಿಯಾಗಿ ಬಿಟ್ಟಿದ್ದಾರೆ. ಸದ್ಯ ಬಿಡುವಿಲ್ಲದಷ್ಟು ಬ್ಯುಸಿಯಾಗಿದ್ದಾರೆ ಈ ನೀರ್ ದೋಸೆ ಬೆಡಗಿ.. ಆದರೆ ಇದೀಗ ಬಿಡುವಿಲ್ಲದೇ ದುಡಿದು ದುಡಿದು ಹರಿಪ್ರಿಯಾಗೆ  ಸಾಕಾಗಿದೆಯಂತೆ.ಹಾಗಾಗಿ ಸ್ವಲ್ಪ ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದಾರೆ.  

ನೀರ್ ದೋಸೆ ಬೆಡಗಿ ಹರಿಪ್ರಿಯಾ ಈಗಷ್ಟೇ ನಾಲ್ಕೈದು ಸಿನಿಮಾ ಮಾಡಿ ಮುಗಿಸಿದ್ದಾರೆ. ಎಲ್ಲಿದ್ದೆ ಇಲ್ಲಿ ತನಕ, ಕನ್ನಡ್ ಗೊತ್ತಿಲ್ಲ, ಕಥಾಸಂಗಮ, ಬಿಚ್ಚುಗತ್ತಿ, ಕುರುಕ್ಷೇತ್ರ ಸೇರಿವೆ. ಈ ಎಲ್ಲಾ ಸಿನಿಮಾಗಳ ಚಿತ್ರೀಕರಣ, ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರಂತೆ ಹರಿಪ್ರಿಯಾ. ಇದೇ ಕಾರಣಕ್ಕಾಗಿ ತಮ್ಮೆಲ್ಲಾ ಕಮಿಟ್ ಮೆಂಟ್ ಗಳನ್ನು ಮುಗಿಸಿ ಈಗ ಕೊಂಚ ದಿನ ಬಿಡುವು ತೆಗೆದುಕೊಳ್ಳಲು ಹರಿಪ್ರಿಯಾ ನಿರ್ಧಾರ ಮಾಡಿದ್ದಾರಂತೆ... ಹಾಗಾಗಿ ಕೆಲವು ದಿನಗಳ ಮಟ್ಟಿಗೆ ಟ್ರಿಪ್ ಹೊರಟಿದ್ದಾರಂತೆ. ಆದರೆ ಎಲ್ಲಿಗೆ ಎಂದು ಹೇಳಿಲ್ಲ. ಟ್ರಿಪ್ ನಿಂದ ಬಳಿಕವಷ್ಟೇ ಹೊಸ ಸಿನಿಮಾದ ಸುದ್ದಿ ಕೊಡುತ್ತೇನೆ. ಸದ್ಯಕ್ಕೆ ನನ್ನ ಎಲ್ಲಾ ಸಿನಿಮಾ ಕೆಲಸ ಮುಗಿಸಿದ್ದೇನೆ. ಇನ್ನು ಕೆಲವು ದಿನಗಳ ನಂತರ ಸಿಗುತ್ತೇನೆ ಎಂದು ಅಭಿಮಾನಿಗಳಿಗೆ ಕೈ ಬೀಸಿರುವ ಹರಿಪ್ರಿಯಾ ರಜಾ ಮಜಾ ಮಾಡಲು ಹೊರಟಿದ್ದಾರೆ. ಒಟ್ಟಾರೆಯಾಗಿ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಿದ್ದ ಹರಿಪ್ರಿಯಾ ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

Edited By

Manjula M

Reported By

Manjula M

Comments