ಖ್ಯಾತ ನಟನ ವಿರುದ್ಧ ಅತ್ಯಾಚಾರ ಆರೋಪ..!! ಮುಂದೇನಾಯ್ತು..?

18 Jun 2019 9:37 AM | Entertainment
104 Report

ಇತ್ತಿಚಿಗೆ ಸೆಲಬ್ರೆಟಿಗಳ ಮೇಲೆ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಅದರಲ್ಲೂ ಮೀಟೂ ಪ್ರಕರಣಗಳು  ಮಾತ್ರ ಹೆಚ್ಚಾಗಿ ಕೇಳಿ ಬರುತ್ತಿದ್ದವು…ಸಾಕಷ್ಟು ನಟ ಮೇಲೆ ಈ ಮೀಟೂ ಆರೋಪವು ಕೇಳಿ ಬಂದಿತ್ತು.  ನಟ ಕರಣ್ ಒಬೆರಾಯ್ ವಿರುದ್ದ ಅತ್ಯಾಚಾರ ಆರೋಪವನ್ನು ಹೊರಿಸಿದ್ದರು… ಇದೀಗ  ನಟ ಕರಣ್ ಒಬೆರಾಯ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ವಿವಾಹವಾಗುವುದಾಗಿ ನಂಬಿಸಿ ಕರಣ್ ಒಬೆರಾಯ್ ಅತ್ಯಾಚಾರವೆಸಗಿ ವಂಚಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಳು. ಮೇ 25 ರಂದು ಬೆಳಿಗ್ಗೆ ವಾಕಿಂಗ್ ಗೆ ತೆರಳಿದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ತಮ್ಮ ಮೇಲೆ ದಾಳಿ ಮಾಡಿರುವುದಾಗಿ ಮಹಿಳೆ ಮತ್ತೊಂದು ದೂರು ನೀಡಿದ್ದು, ಇದು ಸುಳ್ಳು ದಾಳಿ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಇದೇ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. ಅದರ ಜೊತೆಗೆ ಮಹಿಳೆಯ ಪರ ವಕೀಲರನ್ನು ಪೊಲೀಸರು ಕೂಡ ವಶಕ್ಕೆ ತೆಗೆದುಕೊಂಡಿದ್ದಾರೆ. ಅತ್ಯಾಚಾರ ಎಸಗಿದ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಕರಣ್ ಒಬೆರಾಯ್ ಅವರನ್ನು ಪೊಲೀಸರು ಬಂಧಿಸಿದ್ದು, ಇದೀಗ ಬಾಂಬೆ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ. ಸುಳ್ಳು ಆರೋಪ ಮಾಡಿದವರು ಜೈಲು ಪಾಲಾಗಿದ್ದಾರೆ..

Edited By

Manjula M

Reported By

Manjula M

Comments