ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಮಾನ್ವಿತಾ ಮಾಡಿದ್ದೇನು ಗೊತ್ತಾ..?

17 Jun 2019 4:20 PM | Entertainment
294 Report

ಸ್ಯಾಂಡಲ್ ವುಡ್ ನ ಮೋಸ್ಟ್ ಹ್ಯಾಂಡ್ಸಮ್ ಎನರ್ಜಟಿಕ್ ಹಿರೋ ಅಂದ್ರೆ ಅದು ಶಿವಣ್ಣ.. ಹ್ಯಾಟ್ರಿಕ್  ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ಸಖತ್ ಸುದ್ದಿ ಮಾಡಿದ್ದಂತೂ ಸುಳ್ಳಲ್ಲ.. ಈ ಸಿನಿಮಾ ಸಾಕಷ್ಟು ಕಲಾವಿದರಿಗೆ ಸ್ಯಾಂಡಲ್ ವುಡ್ ನಲ್ಲಿ ಹೆಸರು ತಂದು ಕೊಟ್ಟಿತ್ತು… ಅದೇ ಸಿನಿಮಾದಲ್ಲಿ ಮಾನ್ವಿತಾ ಕೂಡ  ಕಾಣಿಸಿಕೊಂಡಿದ್ದರು. ಆ ಸಿನಿಮಾದ ನಂತರ ಮಾನ್ವಿತಾ ಟಗರು ಪುಟ್ಟಿ ಅಂತಾನೇ ಫೇಮಸ್ ಆದರು..

ಇದೀಗ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳು ಇವೆ.. ಆದರೂ ಕೂಡ ಟಗರು ಸಿನಿಮಾದ ನಂತರ ಮಾನ್ವಿತಾ ಅಷ್ಟಾಗಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿಲ್ಲ… ಇದೆಲ್ಲದರ ನಡುವೆ ಮಾನ್ವಿತಾ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.. ಟಗರು ಪುಟ್ಟಿ ಸದ್ದಿಲ್ಲದೆ ಬಾಲಿವುಡ್ ಗೆ ಹಾರಿದ್ದಾರೆ. ಆದರೆ ಮಾನ್ವಿತಾ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ… ಬದಲಿಗೆ ಹಿಂದಿ ಆಲ್ಬಮ್ ಹಾಡಿಗೆ ಹೆಜ್ಜೆಯಾಗಿದ್ದಾರೆ… ಮಾನ್ವಿತಾ ಜೊತೆ ನಾಯಕನಾಗಿ ಬಾಲಿವುಡ್ ನಟ ಕೃಷ್ಣ ಅಭಿಷೇಕ್ ಸ್ಕ್ರೀನ್ ಷೇರ್ ಮಾಡಿದ್ದಾರೆ. ಈ ಹಾಡು ಯೋಧರ ಬಗ್ಗೆ ಇರುವ ಹಾಡಾಗಿದೆಯಂತೆ . ಇಲ್ಲಿ ಮಾನ್ವಿತಾ ಯೋಧನ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಯುದ್ಧಕ್ಕೆ ಹೋದ ಪತಿ ಮರಳಿ ಬರುವುದನ್ನೆ ಕಾಯುತ್ತಿರುವುದನ್ನು ಈ ಹಾಡಿನ ಮೂಲಕ ಕಟ್ಟಿಕೊಡಲಾಗಿದೆಯಂತೆ. ಈ ಹಾಡನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಇನ್ನೂ ಈ ಹಾಡು ಬಿಡುಗಡೆಯಾಗಿಲ್ಲ..

Edited By

Manjula M

Reported By

Manjula M

Comments