ಹೆಂಡತಿಯನ್ನು ಕೊಲೆ ಮಾಡಲು ಹೋಗಿ ಜೈಲು ಪಾಲಾದ ಸ್ಯಾಂಡಲ್ ವುಡ್ ನಟ..!!

15 Jun 2019 2:23 PM | Entertainment
16257 Report

ಇತ್ತಿಚಿಗೆ ಬಣ್ಣದ ಜಗತ್ತಿನಲ್ಲಿ  ಮೋಸ ವಂಚನೆಗಳು ಹೆಚ್ಚಾಗಿ ಬಿಟ್ಟಿವೆ…ಇದೀಗ ಮತ್ತೊಂದು ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ… ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕೊಲೆ ಮಾಡೋಕೆ ಯತ್ನಿಸಿದ ಆರೋಪದಡಿಯಲ್ಲಿ ಸ್ಯಾಂಡಲ್‍ವುಡ್ ನಟ ಇದೀಗ ಜೈಲು ಪಾಲಾಗಿದ್ದಾನೆ. ಸ್ಯಾಂಡಲ್‍ವುಡ್‍ನ ಸ್ಟಾರ್ ನಟರಾದ ಪುನೀತ್, ಯಶ್, ಸುದೀಪ್, ಶಿವರಾಜ್‍ಕುಮಾರ್ ಗಣೇಶ್ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ. . ಶಬರೀಶ್ ಶೆಟ್ಟಿ ಕೆಲವೊಂದು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದನು.. ಇತ್ತೀಗಷ್ಟೇ ಅರುಣ್ ಎನ್ನುವ ಸಿನಿಮಾದಲ್ಲಿ ಶಬರೀಶ್ ಹೀರೋ ಆಗಿ ಅಭಿನಯಿಸಿದ್ದಾನೆ.

ಈ ಸಮಯದಲ್ಲಿ ಪದ್ಮಶ್ರೀ ಎಂಬ ಯುವತಿಗೆ ನಾನು ಸಿನಿಮಾ ಹೀರೋ ನಂಗೆ ಸಿನಿಮಾ ರಂಗದಲ್ಲಿ ಎಲ್ಲರೂ ಗೊತ್ತು ಎಂದು ನಂಬಿಸಿ ವಂಚಿಸಿ ಆಕೆಯನ್ನು ಮದುವೆಯಾಗಿದ್ದಾನೆ.. ಅಷ್ಟೆ ಅಲ್ಲದೆ ಬೆಂಗಳೂರಿನ ಕೆಆರ್ ಪುರ ಬಳಿಯ ಭಟ್ಟರಹಳ್ಳಿಯಲ್ಲಿ ಮನೆ ಮಾಡಿದ್ದನು. ಪತ್ನಿ ಪದ್ಮಶ್ರೀಗೆ ಪತಿ ಶಬರೀಶ್ ಈಗಾಗಲೇ ಒಂದು ಮದುವೆ ಆಗಿದೆ ನಾನು ಎರಡನೆಯವಳು ಎಂಬ ವಿಷಯ ಗೊತ್ತಾಗಿದೆ.. ಈ ವಿಷಯಕ್ಕೆ ಸಂಬಂಧಪಟ್ಟಂತೆ ನಟ ಶಬರೀಶ್ ಮತ್ತು ಪತ್ನಿ ಪದ್ಮಶ್ರೀ ನಡುವೆ ಗಲಾಟೆಗಳು ಪ್ರಾರಂಭವಾಗಿವೆ... ಸ್ನೇಹಿತರ ಸಹಾಯದಿಂದ ಪತ್ನಿಯ ಕೈ ಕಾಲು ಕಟ್ಟಿ, ಇಂಜೆಕ್ಷನ್ ನೀಡುವುದಕ್ಕೆ ಮುಂದಾಗಿದ್ದಾನೆ. ಇದೇ ವೇಳೆ ಪದ್ಮಶ್ರೀ ಸ್ನೇಹಿತ ಮನೆಗೆ ಬಂದು ಈ ದೃಶ್ಯವನ್ನು ನೋಡಿ ಕೆಆರ್ ಪುರ ಪೊಲೀಸರಿಗೆ ವಿಚಾರ ತಿಳಿಸಿದ್ದಾನೆ. ತಕ್ಷಣ ಪೊಲೀಸರು, ನಟ ಶಬರೀಶ್ ಸೇರಿದಂತೆ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ನಾಲ್ವರು ತಲೆಮರೆಸಿಕೊಂಡಿದ್ದಾರೆ.ಸದ್ಯ ಗಂಡನಿಂದ ಹಲ್ಲೆಗೊಳಾದ ಪತ್ನಿ ಪದ್ಮಶ್ರೀ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

 

Edited By

Manjula M

Reported By

Manjula M

Comments