ಬಿಕಿನಿ ಬೇಬಿ ಬಂಪ್ ಪೋಟೊ ಹಾಕಿ ಟ್ರೋಲ್ ಗೆ ಒಳಗಾದ ಸುದೀಪ್ ನಾಯಕಿ..!!

11 Jun 2019 11:20 AM | Entertainment
6842 Report

ಸೆಲಬ್ರೆಟಿಗಳು ಸುದ್ದಿಯಾಗೋದು ಕಾಮನ್, ಅದೇ ರೀತಿ ಟ್ರೋಲ್ ಆಗುವುದು ಕೂಡ ಕಾಮನ್… ಇದೀಗ ಬಹುಭಾಷಾ ನಟಿ ಸಮೀರಾ ರೆಡ್ಡಿ ಸದ್ಯ ತಾಯ್ತನವನ್ನು ಅನುಭವಿಸುತ್ತಾ ಖುಷಿಯಲ್ಲಿದ್ದಾರೆ. ಸಮೀರಾ ರೆಡ್ಡಿ ಇದೀಗ 8 ತಿಂಗಳ ಗರ್ಭಿಣಿಯಾಗಿದ್ದು, ತಮ್ಮ ಬೇಬಿ ಬಂಪ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಪೋಟೋಗಳನ್ನು ನೋಡಿ ಜನರು ಟ್ರೋಲ್ ಮಾಡುತ್ತಿದ್ದರು..  ಈಗ ಸಮೀರಾ ಬೋಲ್ಡ್ ಫೋಟೋ ಹಂಚಿಕೊಳ್ಳುವ ಮೂಲಕ ಟ್ರೋಲ್ ಮಾಡೋರಿಗೆ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.

ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ವಿವಾಹವಾಗಿದ್ದರು.. ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಮೀರಾ ರೆಡ್ಡಿ ತಮ್ಮ ಪತಿ ಅಕ್ಷಯ್ ವಾರ್ದೆ ಹಾಗೂ ಮಗ ಹಂಸ್ ಜೊತೆ ಗೋವಾದಲ್ಲಿ ರಜೆಯನ್ನು ಕಳೆಯುತ್ತಿದ್ದಾರೆ. ಸಮೀರಾ ತಮ್ಮ ಮಗನ ಜೊತೆ ಸಮುದ್ರದಲ್ಲಿ ಕಾಲ ಕಳೆಯುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಸಮೀರಾ ರೆಡ್ಡಿ ಬಿಕಿನಿಯಲ್ಲಿರುವ ಫೋಟೋ ಹಾಕಿ ಅದಕ್ಕೆ, ಯಾರು ಆಳವಿಲ್ಲದ ತುದಿಯಲ್ಲಿ ಈಜುತ್ತಾರೆಯೋ ಅವರು ವ್ಯಕ್ತಿಯ ಆತ್ಮದ ಆಳವನ್ನು ತಿಳಿದಿರುವುದಿಲ್ಲ. ನಾನು ನನ್ನ ಬೇಬಿ ಬಂಪ್ ಎಂಜಾಯ್ ಅನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ..  ಎಂದು ಇನ್‍ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.  

Edited By

Manjula M

Reported By

Manjula M

Comments