ರಸ್ತೆ ಅಪಘಾತದಲ್ಲಿ `ಭಜರಂಗಿ' ಚಿತ್ರದ ಕಲಾವಿದ ಸಾವು..!!

11 Jun 2019 9:22 AM | Entertainment
4456 Report

ಸೋಮವಾರ ರಾತ್ರಿ ಕಗ್ಗಲಿಪುರ ಸಮೀಪದ ಗಾಂಧೀನಗರದಲ್ಲಿ ಅಪಘಾತವೊಂದು ನಡೆದಿದೆ. ಆ ಅಪಘಾತದಲ್ಲಿ ಭಜರಂಗಿ ಸಿನಿಮಾದ ಖಳನಾಯಕ ಸಾವನ್ನಪ್ಪಿದ್ದಾರೆ. ಭೀಕರ ರಸ್ತೆ ಅಪಘಾತದಲ್ಲಿ ಶಿವರಾಜ್ ಕುಮಾರ್ ನಟನೆಯ ಭಜರಂಗಿ ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದ ಕುಮಾರ್ ಕೊನೆಯುಸಿರೆಳೆದಿದ್ದಾರೆ.

ಸೋಮವಾರ ರಾತ್ರಿ ಕಗ್ಗಲಿಪುರ ಸಮೀಪದ ಗಾಂಧಿನಗರದಲ್ಲಿ ಮೃತಪಟ್ಟಿದ್ದಾರೆ. ಕುಮಾರ್ ಅವರು ಕನಕಪುರ ತಾಲೂಕಿನ ನಿವಾಸಿಯಾಗಿದ್ದು, ಗಾಂಧಿನಗರದ ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದಾಗ ಆ ಸಮಯದಲ್ಲಿ ವಿರುದ್ದವಾಗಿ ಬರುತ್ತಿದ್ದ ಬುಲೆರೊ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಖಳನಟ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಮಾರ್ ಅವರು ಖಳನಟನಾಗಿ ಭಜರಂಗಿ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದರು.

Edited By

Manjula M

Reported By

Manjula M

Comments