ರಕ್ಷಿತಾ ಪ್ರೇಮ್ ತಮ್ಮನ ಸಿನಿಮಾದ ನಾಯಕಿ ಇವರೇ ನೋಡಿ..!

10 Jun 2019 3:49 PM | Entertainment
727 Report

ಸ್ಯಾಂಡಲ್ ವುಡ್ ನ ಜೋಗಿ ಪ್ರೇಮ್ ಸಿನಿಮಾ ಎಂದರೆ ಸಾಕು ಸಿನಿ ರಸಿಕರು ಏನೇನೋ ಯೋಚನೆ ಮಾಡಲು ಶುರು ಮಾಡುತ್ತಾರೆ.. ವಿಭಿನ್ನ ಸಿನಿಮಾಗಳ ಪ್ರಯತ್ನದಲ್ಲಿ ಯಾವಾಗಲೂ ಕೂಡ ಮುಂದೆ ಇರುತ್ತಾರೆ. ಅವರು ಕೊಟ್ಟಿರುವ ಸಿನಿಮಾಗಳು ಸಿನಿ ರಸಿಕರಿಗೆ ಇಷ್ಟವಾಗುತ್ತವೆ.. ದಿ ವಿಲನ್ ನಂತರ ಮತ್ತೊಂದು ಸಿನಿಮಾಗೆ ಕೈ ಹಾಕಿರುವುದು ಎಲ್ಲರಿಗೂ ಕೂಡ ತಿಳಿದೆ ಇದೆ..  ಅದು ತನ್ನ ಪತ್ನಿ ಸಹೋದರನಿಗಾಗಿ.. ಏಕಲವ್ಯ ಸಿನಿಮಾದ ಮೂಲಕ ರಕ್ಷಿತಾ ತಮ್ಮ ಅಭಿಷೇಕ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಸುಧಾರಾಣಿ ಮಗಳನ್ನು ಕರೆ ತರುತ್ತಾರೆ ಎಂದು ಹೇಳಲಾಗುತ್ತಿತ್ತು…  ಆದರೆ ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಸಹೋದರ ಅಭಿಷೇಕ್ ಗಾಗಿ ಮಾಡುತ್ತಿರುವ 'ಏಕಲವ್ಯ' ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಈ ಸಿನಿಮಾಗೆ ಕನ್ನಡ ಹುಡುಗಿಯನ್ನೇ ನಾಯಕಿಯಾಗಿ ಮಾಡುವುದಾಗಿ ಈ ಮೊದಲೇ ನಿರ್ದೇಶಕ ಪ್ರೇಮ್ ಹೇಳಿಕೊಂಡಿದ್ದಾರೆ. ಆದರೆ ನಾಯಕಿ ಯಾರು ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ರಕ್ಷಿತಾ ನಾಯಕಿ ರಚಿತಾ ರಾಮ್ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಆದರೆ ರಚಿತಾ ಏಕೈಕ ನಾಯಕಿಯಲ್ಲ ಎಂದೂ ಸುಳಿವು ನೀಡಿದ್ದಾರೆ. ರಚಿತಾ ನಾಯಕಿಯರಲ್ಲಿ ಒಬ್ಬರು ಎಂದು ರಕ್ಷಿತಾ ಬಹಿರಂಗಪಡಿಸಿದ್ದಾರೆ. ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚ್ಚು ಸದ್ಯ ಪಡ್ಡೆ ಹುಡುಗರ ಹಾಟ್ ಫೇವರೆಟ್ ನಾಯಕಿಯಾಗಿ ಬಿಟ್ಟಿದ್ದಾರೆ… ಇನ್ನೊಬ್ಬ ನಾಯಕಿನ ಬಗ್ಗೆ ರಕ್ಷಿತಾ ತಿಳಿಸಿಲ್ಲ… ಪ್ರೇಮ್ ನಿರ್ದೇಶನದ ಈ ಸಿನಿಮಾ ತೆರೆ ಮೇಲೆ ಯಾವ ರೀತಿ ಮೋಡಿ ಮಾಡುತ್ತದೆ ಎಂಬುದು ಸದ್ಯ ಕುತೂಹಲದ ವಿಷಯ.

Edited By

Manjula M

Reported By

Manjula M

Comments