ಬಾಡಿಗೆ ಮನೆ ಸಿಗದೆ ಪರದಾಡಿದ ಸ್ಟಾರ್ ನಟಿ.. ! ಕಾರಣ ಏನ್ ಗೊತ್ತಾ..?

10 Jun 2019 1:44 PM | Entertainment
2521 Report

ಸೆಲಬ್ರೆಟಿಗಳು ಅಂದಾಕ್ಷಣಾ ಅವರಿಗೆ ಕಷ್ಟವೇ ಇರುವುದಿಲ್ಲ ಎಂದು ಸಾಕಷ್ಟು ಜನ ಹೇಳುತ್ತಿರುತ್ತಾರೆ.. ಆದರೆ ರೀಲ್ ಜೀವನಕ್ಕೂ ರಿಯಲ್ ಜೀವನಕ್ಕೂ ಸಾಕಷ್ಟು ವ್ಯತ್ಯಾಸಗಳು ಇರುತ್ತವೆ.. ಇದೀಗ ಬಾಲಿವುಡ್ ನ ಬೋಲ್ಡ್ ನಟಿಯಾದ ತಾಪ್ಸಿ ಪನ್ನು ಕೂಡ ಸಮಸ್ಯೆಯನ್ನು ಎದುರಿಸಿದ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಬಾಲಿವುಡ್‌ ಬೋಲ್ಡ್‌ ಆ್ಯಂಡ್ ಸ್ಮಾರ್ಟ್‌ ನಟಿ ತಾಪ್ಸಿ ಪನ್ನು ಸಮಯವಿಲ್ಲದಷ್ಟು ತೆಲುಗು, ತಮಿಳು ಹಾಗೂ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.

ತಾಪ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜಗತ್ತಿಗೆ ಕಾಲಿಟ್ಟ ತಾಪ್ಸಿಯನ್ನು ತೆರೆ ಮೇಲೆ ನೋಡಿ ಮೆಚ್ಚಿದ ಅಭಿಮಾನಿಗಳು ಆಕೆಯನ್ನು ನಿಜ ಜೀವನದಲ್ಲಿ ಪಕ್ಕ ವಾಸ ಮಾಡಲು ಅವಕಾಶ ನೀಡದಂತೆ ನೀಡುತ್ತಿರಲಿಲ್ಲವಂತೆ.. ಬಣ್ಣದ ಜಗತ್ತಿಗೆ ದೊಡ್ಡ ಆಸೆ ಹೊತ್ತು ಬಂದ ತಾಪ್ಸಿ ಯಾರ ಸಹಾಯವಿಲ್ಲದೆ ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡರು. . ಮೊದಲ ಸಿನಿಮಾ ಮಾಡಿದ ನಂತರ ಮುಂಬೈನಲ್ಲಿ ಮನೆ ಮಾಡುವುದಾಗಿ ಪ್ಲಾನ್ ಮಾಡುವಾಗ ಯಾರೊಬ್ಬ ಮುಂಬೈ ನಿವಾಸಿಯೂ ಮನೆ ನೀಡುವುದಿಲ್ಲ. ನೀನೊಬ್ಬ ಒಂಟಿ ಮಹಿಳೆಯೆಂದು ತಾಪ್ಸಿಯನ್ನು ದೂರ ಮಾಡಿದರಂತೆ. ಮುಂಬೈನಲ್ಲಿ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ.. ಆದರೆ ನನಗೆ ಅಲ್ಲಿ ವಾಸ ಮಾಡಲು ಜಾಗ ಕೊಡಲಿಲ್ಲ…ದೆಹಲಿ ಅಥವಾ ಹೈದ್ರಾಬಾದ್ ಅಷ್ಟು ಆತ್ಮೀಯತೆ ಹೊಂದಿರುವ ಜನರು ಸಿಗುವುದಿಲ್ಲ. ಒಂಟಿಯಾಗಿರುವ ಕಾರಣದಿಂದ ಯಾರೂ ಮನೆ ನೀಡುತ್ತಿರಲಿಲ್ಲ. ಆದರೆ ದೇವರ ದಯೆ ಈಗ ನನ್ನದೇ ಸ್ವಂತ ಮನೆ ಮಾಡಿಕೊಂಡು ಸಹೋದರಿ ಜೊತೆ ವಾಸ ಮಾಡುತ್ತಿದ್ದೇನೆ ' ಎಂದು ಖಾಸಗಿ ಕಾರ್ಯಕ್ರಮದಲ್ಲಿ ತಮ್ಮ ಹಳೆ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.. ಒಟ್ಟಾರೆಯಾಗಿ ಸಮಾಜದಲ್ಲಿ ಒಂಟಿ ಮಹಿಳೆಯರಿಗೆ ಜಾಗವಿಲ್ಲ ಎಂಬುದು ಸೆಲಬ್ರೆಟಿಗಳು ಕೂಡ ಗೊತ್ತಾಗಿದೆ.

Edited By

Manjula M

Reported By

Manjula M

Comments