ಪುನೀತ್ ನಾಯಕಿಯ ಜೊತೆ ಡೇಟಿಂಗ್’ನಲ್ಲಿ ಇದ್ದಾರಾ ಜಸ್ಟ್ರಿತ್ ಬೂಮ್ರಾ..!!!

10 Jun 2019 11:08 AM | Entertainment
680 Report

ಇತ್ತಿಚಿಗೆ ಸೆಲಬ್ರೆಟಿಗಳ ಲವ್ವಿ ಡವ್ವಿ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.. ಬಣ್ಣದ ಜಗತ್ತಿನವರಿಗೆ ಕ್ರಿಕೇಟರ್ಸ್ ಮೇಲೆ ಪ್ರೀತಿ ಹುಟ್ಟೋದು ಹಳೆ ವಿಚಾರ ಅನ್ನುವುದು ಎಲ್ಲರಿಗೂ ಕೂಡ ತಿಳಿದೆ ಇದೆ.. ಇದೀಗ ಅದೇ ಸಾಲಿಗೆ ಮತ್ತೊಂದು ಲವ್ ಸ್ಟೋರಿ ಸೇರಿಕೊಂಡಿದೆ ಎನ್ನಬಹುದು..  ನಟ ಸಾರ್ವಭೌಮ ನಟಿ ಅನುಪಮಾ ಹಾಗೂ ಕ್ರಿಕೆಟರ್ ಜಸ್ಟ್ರಿತ್ ಬೂಮ್ರಾ ನಡುವೆ ಕುಚ್ ಕುಚ್ ಶುರುವಾಗಿದೆ ಎನ್ನುವ ಮಾತು ಶುರುವಾಗಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸೌತ್ ಇಂಡಸ್ಟ್ರಿ ಸ್ಟಾರ್ ನಟಿ ಅನುಪಮಾ.. ಅವರಿಗೂ ಮತ್ತು ಬೂಮ್ರ ಅವರಿಗೆ ಲಿಂಕ್ ಹೇಗಾಯ್ತು ಅನ್ನೋದೆ ಎಲ್ಲರ ತಲೆ ಕೆಡಿಸಿಕೊಳ್ಳುವಂತಹ ವಿಚಾರವಾಗಿದೆ.. ಇಬ್ಬರ ನಡುವಿನ ಪ್ರೀತಿ ವಿಚಾರ ಎಲ್ಲರಿಗೂ ಕೂಡ ಗೊತ್ತಾಗಿದ್ದು ಟ್ವಿಟರ್ ನಲ್ಲಿ.. ಬೂಮ್ರಾ ಕೇವಲ 25 ಮಂದಿಯನ್ನು ಮಾತ್ರ ಫಾಲೋ ಮಾಡ್ತಾ ಇದ್ದಾರೆ. ಅದರಲ್ಲಿ ಅನುಪಮಾ ಅವರೂ ಕೂಡ ಒಬ್ಬರು. ಅಷ್ಟೇ ಆಗಿದ್ರೆ ಸುಮ್ಮನಾಗಬಹುದಿತ್ತು. ಆದರೆ ಲೈಕ್ ಒತ್ತಿ, ಶೇರ್ ಕೂಡಾ ಮಾಡುತ್ತಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇವರಿಬ್ಬರು ನಿಜವಾಗಲು ಲವ್ವಿನಲ್ಲಿ ಬಿದ್ದಿದ್ದಾರಾ ಎಂಬುದನ್ನು ಅವರೇ ಕನ್ಫರ್ಮ್ ಮಾಡಬೇಕಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

Edited By

Manjula M

Reported By

Manjula M

Comments