ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಹಾಕಿದ 'ಕಿಚ್ಚ ಸುದೀಪ್ '..!! ವಿಡಿಯೋ ವೈರಲ್

08 Jun 2019 9:29 AM | Entertainment
382 Report

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೆ ಮುಂದೆ ನೋಡುತ್ತಾರೆ… ತಮ್ಮ ತಮ್ಮ ಮಕ್ಕಳನ್ನು ಇಂಟರ್ ನ್ಯಾಷನಲ್  ಸ್ಕೂಲಿಗೆ ಸೇರಿಸಬೇಕು.. ಒಳ್ಳೆಯ ವಿಧ್ಯಾಭ್ಯಾಸ ಕೊಡಿಸಬೇಕು ಅಂತೆಲ್ಲಾ ಯೋಚನೆ ಮಾಡ್ತಾರೆ.. ಸರ್ಕಾರಿ ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಯಾರಿಗೂ ಕೂಡ ಇಲ್ಲ.. ಅಲ್ಲಿ ಸರಿಯಾದ ವಿದ್ಯಾಭ್ಯಾಸ ಕೊಡಲ್ಲ ಅಂತ ಯೋಚನೆ ಮಾಡುವವರೇ ಜಾಸ್ತಿ… ಸರ್ಕಾರದಿಂದ ಸಾಕಷ್ಟು ಯೋಜನೆಗಳು ಜಾರಿಯಾಗಿವೆ.. ಆದರೂ ಸರ್ಕಾರಿ ಶಾಲೆ ಎಂದರೆ ಹಿಂದೇಟು ಹಾಕುವವರೇ ಹೆಚ್ಚು..

ಕಿಚ್ಚ ಸುದೀಪ್‌ ಅವರು ಈ ಬಾರಿ ಸರ್ಕಾರಿ ಶಾಲಾ ಮಕ್ಕಳಿಗೆ ತಮ್ಮ ಚಾರಿಟಬಲ್ ಟ್ರಸ್ಟ್​ನಿಂದ ಉಚಿತ ಶೂ ಹಾಗೂ ಪುಸ್ತಕ ವಿತರಣೆ ಮಾಡಿದರು.   ಜೆಪಿ ನಗರದ ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ನಟ ಸುದೀಪ್​ ಉಚಿತವಾಗಿ ಶೂ ಹಾಗೂ ಪುಸ್ತಕಗಳನ್ನು ನೀಡಿದರು. ಕಿಚ್ಚ ಸುದೀಪ್ ಹೆಸರಿನ ಚಾರಿಟಬಲ್ ಟ್ರಸ್ಟ್​ನಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಯೊಬ್ಬನಿಗೆ ಸ್ವತಃ ತಾವೇ ಶೂ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಸದ್ಯ ಸುದೀಪ್ ಅವರ ಅಭಿನಯದ ಪೈಲ್ವಾನ್‌ ಸಿನಿಮಾ ಒಟ್ಟು 8 ಭಾಷೆಯಲ್ಲಿ ತೆರೆಕಾಣಲು ಸಿದ್ದವಾಗುತ್ತಿದ್ದು, ಆಗಸ್ಟ್​ 8ರ ವರಮಹಾಲಕ್ಷ್ಮೀ ಹಬ್ಬದ ದಿನದಂದು ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿದೆ.  ಒಟ್ಟಾರೆಯಾಗಿ ಸ್ಟಾರ್ ನಟ ನಟಿಯರು ಕೂಡ ಸರ್ಕಾರಿ ಶಾಲೆಯ ಬಗ್ಗೆ ಒಲವನ್ನು ತೋರಿಸಿದ್ದಾರೆ.. ಈಗಾಗಲೇ ಕೆಲ ನಟ ನಟಿಯರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ.

https://www.facebook.com/SShyamPrasad01/videos/2707699872634693/

Edited By

Manjula M

Reported By

Manjula M

Comments