ಬಾಡಿಗಾರ್ಡ್ ಗೆ ಕಪಾಳ ಮೋಕ್ಷ ಮಾಡಿದ ಬಾಲಿವುಡ್ ಬ್ಯಾಡ್ ಬಾಯ್..!!!

07 Jun 2019 1:19 PM | Entertainment
149 Report

ಬಾಲಿವುಡ್ ನಲ್ಲಿ ಬ್ಯಾಡ್ ಅಂತಾನೇ ಫೇಮಸ್ ಆಗಿರುವ  ನಟ ಸಲ್ಮಾನ್ ಖಾನ್ ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಹೀರೋ,… ಪದೇ ಪದೇ ಸುದ್ದಿಯಾಗುತ್ತಿದ್ದ ಸಲ್ಲು ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಆಗಾಗ ಕೆಟ್ಟ ಕಾರಣಗಳಿಗೆ ಸುದ್ದಿಯಾಗುತ್ತಾರೆ. ಇದೀಗ ಅವರು ತಮ್ಮ ಸೆಕ್ಯುರಿಟಿ ಗಾರ್ಡ್ ಗೆ ಕಪಾಳ ಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಷಯಕ್ಕಾಗಿ ಸಲ್ಲು ಸುದ್ದಿಯಾಗಿದ್ದಾರೆ.

ಹೌದು, ಸಲ್ಮಾನ್ ಖಾನ್ ತನ್ನ ಬಾಡಿ ಗಾರ್ಡ್ ಕಪಾಳಮೋಕ್ಷ ಮಾಡಿದ್ದಾರೆ.. ಅರೇ ಹೌದಾ.. ಯಾಕೆ ಅಂತ ನೀವೆಲ್ಲಾ ಯೋಚನೆ ಮಾಡುತ್ತಿರಬಹುದು..ಕಾರಣ ಇಷ್ಟೆ.. ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ ತಮ್ಮ ಬಿಗಿ ಭದ್ರತೆಯಲ್ಲಿ ಹೋಗುವಾಗ ತಮ್ಮನ್ನ ಮುಟ್ಟಲು ಬಂದ ಪುಟ್ಟ ಅಭಿಮಾನಿಯೊಬ್ಬರ ಜೊತೆ ಗಾರ್ಡ್ ಒರಟಾಗಿ ವರ್ತಿಸಿದ್ದು ಸಲ್ಮಾನ್ ಸಿಟ್ಟಿಗೆ ಕಾರಣವಾಗಿದೆ.  ಇದ್ದಕ್ಕಿದ್ದಂತೆ ಗಾರ್ಡ್ ಕಡೆಗೆ ತಿರುಗಿದ ಸಲ್ಮಾನ್ ಅಭಿಮಾನಿಗಳ ಮುಂದೆಯೇ ಕಪಾಳ ಮೋಕ್ಷ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವರು ಈ ವಿಚಾರವಾಗಿ ಸಲ್ಮಾನ್ ರನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಬಹಿರಂಗವಾಗಿ ಈ ರೀತಿ ಕಪಾಳ ಮೋಕ್ಷ ಮಾಡಿದ್ದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.. ಸಲ್ಲು ಪದೇ ಪದೇ ಸುದ್ದಿಯಾಗುತ್ತಿರುವುದು ಕಾಮನ್ ಆಗಿ ಬಿಟ್ಟಿದೆ..

Edited By

Manjula M

Reported By

Manjula M

Comments