‘ನಿನ್ ಹೊಟ್ಟೆ ತಣ್ಣಗಿರ್ಲಪ್ಪಾ’ ಎಂದು ಯಶ್ ಗೆ ಹಾರೈಸಿದ ಜನತೆ..!!

06 Jun 2019 2:43 PM | Entertainment
950 Report

ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟರಲ್ಲಿ ಅಗ್ರಸ್ಥಾನದಲ್ಲಿ ಇರೋದು ಸದ್ಯ ಯಶ್…ಕೆಜಿಎಫ್ ಸಿನಿಮಾ ಬಿಡುಗಡೆಯಾದ ದಿನದಿಂದ ಯಶ್ ನ್ಯಾಷನಲ್ ಸ್ಟಾರ್ ಆಗಿ ಬಿಟ್ಟಿದ್ದಾರೆ... ಆದರೂ ಕೂಡ ಯಶ್ ಗೆ ಯಾವುದೇ ರೀತಿಯ ಅಹಂ ಇಲ್ಲ..  ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅವರನ್ನು ಕೊಂಡಾಡದೆ ಇರವವರೇ ಇಲ್ಲ… ಯಶ್ ಸಿನಿಮಾದ ಜೊತೆ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಕೂಡ ಮಾಡುತ್ತಿದ್ದಾರೆ..

ರಾಕಿಂಗ್ ಸ್ಟಾರ್ ಯಶ್, ಯಶೋಮಾರ್ಗ ಸಂಸ್ಥೆ ಮೂಲಕ ಇದೀಗ ಉತ್ತರ ಕರ್ನಾಟಕದ ಹಲವು ಗ್ರಾಮಗಳ ನೀರಿನ ಬವಣೆ ನೀಗಿಸಲು ಮುಂದಾಗಿದ್ದಾರೆ. ಕುಡಿಯಲೂ ನೀರಿಲ್ಲದೇ ಒದ್ದಾಡುತ್ತಿರುವ ಜನಕ್ಕೆ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಹಂಚುವ ಕೆಲಸಕ್ಕೆ ಯಶ್ ಅವರ ಯಶೋಮಾರ್ಗ ಮಾಡುತ್ತಿದೆ.. ಯಶ್ ಅವರ ಈ ಕೆಲಸಕ್ಕೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎರಡು ಬಿಂದಿಗೆ ನೀರು ಕೊಟ್ಟ ಯಶ್ ನಿನ್ನ ಹಾಗೂ ನಿನ್ನ ಕುಟುಂಬದ ಹೊಟ್ಟೆ ತಣ್ಣಗೆ ಇರಲಿ ಎಂದು ಜನರು  ಮನಸ್ಸು ತುಂಬಿ ಹಾರೈಸುತ್ತಿದ್ದಾರೆ. ಇನ್ನು‍ ರಾಕಿಂಗ್ ಸ್ಟಾರ್ ನ ಈ ಒಳ್ಳೆಯ ಕೆಲಸಕ್ಕೆ ಸಾಮಾಜಿಕ ಜಾಲತಾಣದ ಮೂಲಕವೂ ಶುಭ ಹಾರೈಕೆ ಬರುತ್ತಿದ್ದು, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ನಮ್ಮ ಬಾಸ್ ಮಾಡ್ತಿದ್ದಾರೆ. ನೀವೇ ನಿಜವಾದ ಹೀರೋ ಎಂದು ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ ಯಶ್ ಅವರು ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಕೂಡ ಹಿರೋ ಆಗಿದ್ಧಾರೆ.. ಯಶ್ ಕಾರ್ಯಗಳನ್ನು ಜನರು ಕೊಂಡಾಡುತ್ತಿದ್ದಾರೆ.

Edited By

Manjula M

Reported By

Manjula M

Comments