ಮತ್ತೆ ಟ್ರೋಲಿಗರಿಗೆ ಆಹಾರವಾದ ಶಾರುಖ್ ಖಾನ್ ಮಗಳ ಪೋಟೋ..!! ಅಂತದ್ದೇನಿದೆ ಆ ಪೋಟೋದಲ್ಲಿ…?

06 Jun 2019 10:39 AM | Entertainment
10094 Report

ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಕೂಡ ಸ್ಟಾರ್ಸ್ಗಳು ಹಾಗೂ ಅವರ ಮಕ್ಕಳು ಸುದ್ದಿಯಲ್ಲಿ ಇರುತ್ತಾರೆ.. ಅದರಲ್ಲೂ ಬಾಲಿವುಡ್ ಸ್ಟಾರ್ಸ್ ಗಳಂತೂ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುತ್ತಾರೆ. ಅವರ ಜೊತೆಗೆ ಅವರ ಮಕ್ಕಳು ಕೂಡ ಸುದ್ದಿಯಾಗುತ್ತಾರೆ.  ಬಾಲಿವುಡ್ ನಲ್ಲಿ ಈಗ ಕಲಾವಿದರ ಮಕ್ಕಳು ಇದೀಗ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ. ಕೆಲ ಬಾಲಿವುಡ್ ಸ್ಟಾರ್ಸ್ ಮಕ್ಕಳು ಈಗಾಗಲೇ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟಿದ್ದಾರೆ.. ಇನ್ನೂ ಕೆಲವರು ಸಿನಿಮಾಕ್ಕೆ ಬರಲು ಇಲ್ಲಾ ರೀತಿಯ ತಯಾರಿಯನ್ನು ನಡೆಸುತ್ತಿದ್ದಾರೆ.

ಪದೇ ಪದೇ ಸುದ್ದಿಯಾಗುತ್ತಿರುವುದರಲ್ಲಿ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಒಬ್ಬಳು. ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟೀವ್ ಆಗಿರುವ ಸುಹಾನಾ ಖಾನ್ ಗೆ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇದೀಗ ಸುಹಾನಾ ಖಾನ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸುಹಾನಾ ಕನ್ನಡಿ ಮುಂದೆ ನಿಂತುಕೊಂಡು ಸೆಲ್ಫಿ ತೆಗೆದುಕೊಂಡಿದ್ದಾಳೆ..  ಈ ಫೋಟೋದಲ್ಲಿ ಸುಹಾನಾ ಖಾನ್ ಫೋನ್ ಪೌಂಚ್  ಹಿಂದೆ ಹಾಕಿರುವ ಎಟಿಎಂ ಕಾರ್ಡ್ ಸ್ಪಷ್ಟವಾಗಿ ಕಾಣಿಸುತ್ತಿದೆ.. ಸುಹಾನಾ ಗ್ಲಾಮರಸ್ ಒಂದು ಕಡೆ ಸಖತ್ ಸುದ್ದಿಯಾದರೆ ಮತ್ತೊಂದು ಕಡೆ ಆಕೆ ಎಟಿಎಂ ಕಾರ್ಡ್ ಟ್ರೋಲರ್ ಬಾಯಿಗೆ ಆಹಾರವಾಗಿ ಬಿಟ್ಟಿದೆ.. ಫೋನ್ ಹಿಂಭಾಗದಲ್ಲಿ ಎಟಿಎಂ ಕಾರ್ಡ್ ಇಟ್ಟುಕೊಳ್ತಾಳೆಂದು ಕೆಲವರು ಕಮೆಂಟ್ ಕೂಡ ಮಾಡಿದ್ದಾರೆ. ಸುಹಾನಾ ಬಾಲಿವುಡ್ ಗೆ ಬರುವ ಮೊದಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವುದಂತೂ ಸುಳ್ಳಲ್ಲ..

Edited By

Manjula M

Reported By

Manjula M

Comments