ಶಾರುಖ್​ ಸಿನಿಮಾದಲ್ಲಿ ಮಗಳು ಸುಹಾನಾ ಖಾನ್ ಈಗಾಗಲೇ  ಅಭಿನಯಿಸಿದ್ದಾಳಂತೆ ​..!

04 Jun 2019 12:08 PM | Entertainment
234 Report

ಸ್ಟಾರ್ ನಟ ನಟಿಯರ ಮಕ್ಕಳು ಸಿನಿಮಾ ಗೆ ಎಂಟ್ರಿ ಕೊಡುವುದು ಕಾಮನ್.. ನಟರ ಜೊತೆಯಲ್ಲಿಯೇ ಮಕ್ಕಳು ಅಭಿನಯಿಸುವುದು ತುಂಬಾ ರೇರ್.. ಅದೇ ರೀತಿಯಾಗಿ ​ ಶಾರುಖ್ ಖಾನ್  ಮಗಳು ಸುಹಾನಾ ಖಾನ್​ ಯಾವಾಗ ಬಾಲಿವುಡ್​ನಲ್ಲಿ ಯಾವ ನಿರ್ದೇಶಕರ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ​ಶಾರುಖ್​ ಮಗಳು ಸುಹಾನಾ ಈ ಹಿಂದೆಯೇ ಅಪ್ಪನ ಸಿನಿಮಾದಲ್ಲಿ ಅಭಿನಯಿಸಿದ್ದರಂತೆ...ಅರೇ ಹೌದಾ ಅಂತೀರಾ..?

ಎಸ್.. ಶಾರುಖ್​ ಅಭಿನಯದ 'ಮೈ ನೇಮ್​ ಇಸ್​ ಖಾನ್​' ಚಿತ್ರದಲ್ಲೇ ಸುಹಾನಾ ಬಾಲಿವುಡ್​ಗೆ ಎಂಟ್ರಿ ಕೊಡಬೇಕಿತ್ತು. ಆದರೆ ಆಗ ಅದು ಸಾಧ್ಯವಾಗಲಿಲ್ಲ.. ಕಾರಣ ಏನು ಅಂತ ಸುಹಾನಾ ಸ್ನೇಹಿತೆ ಹಾಗೂ 'ಸ್ಟುಡೆಂಟ್​ ಆಫ್​ ದ ಇಯರ್ 2'​ ಚಿತ್ರದ ನಾಯಕಿ ಅನನ್ಯಾ ಪಾಂಡೆ ತಿಳಿಸಿದ್ದಾರೆ.. ಅಮೆರಿಕದಲ್ಲಿ ಮೈ ನೇಮ್ ಇಸ್​​ ಖಾನ್​ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸುಹಾನಾ ಹಾಗೂ ನಾನು ಶಾರುಖ್​ ಅಂಕಲ್​ ಜತೆ ಹೋಗಿದ್ದೆವು. ಆಗ ಒಂದು ದೃಶ್ಯದಲ್ಲಿ ಅಲ್ಲಿ ದಾರಿ ಮೇಲೆ ಓಡಾಡುವ ಪಾತ್ರಕ್ಕಾಗಿ ಜನ ಬೇಕಾಗಿತ್ತು. ಅದರಲ್ಲಿ ಸುಹಾನಾ ಹಾಗೂ ನಾನು ಇಬ್ಬರು ನಟಿಸಿದ್ದೆವು..  ಆ ಒಂದು ದೃಶ್ಯದಲ್ಲಿ ನಾವು ಸಿಕ್ಕಾಪಟ್ಟೆ ಓವರ್​ಆಕ್ಟಿಂಗ್​ ಮಾಡಿ ಬಿಟ್ಟಿದ್ದೆವು.. ಅದಕ್ಕಾಗಿ 7-8 ಟೇಕ್​ ಆಗಿತ್ತು. ಆದರೆ ಸಿನಿಮಾ ಬಿಡುಗಡೆಯಾದಾಗ ಆ ದೃಶ್ಯವನ್ನು ನೋಡಲೆಂದು ಚಿತ್ರಮಂದಿರಕ್ಕೆ ಹೋಗಿದ್ದೆವು. ಆದರೆ ಅದನ್ನು ಸಿನಿಮಾದಿಂದ ತೆಗೆದುಹಾಕಲಾಗಿತ್ತು'' ಎಂದು ಅನನ್ಯಾ ಹೇಳಿದ್ದಾರೆ. ಒಟ್ಟಾರೆಯಾಗಿ ಶಾರುಖ್ ಮಗಳನ್ನು ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ಧಾರೆ ಅಭಿಮಾನಿಗಳು.. ಅಭಿಮಾನಿಗಳ ಆಸೆ ಯಾವಾಗ ಈಡೇರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

 

Edited By

Manjula M

Reported By

Manjula M

Comments