ಅಪ್ಪನಿಗೆ ಬಂತು ಸ್ಟಾರ್ ಮಗಳ ಭಾವನಾತ್ಮಕ ಪತ್ರ..!!

03 Jun 2019 1:11 PM | Entertainment
247 Report

ತಂದೆ ಮತ್ತು ಮಗಳ ಬಾಂಧವ್ಯ ಯಾರಿಗೂ ಕೂಡ ಅರ್ಥ ಆಗಲ್ಲ… ಅವರಿಬ್ಬರ ಮಧ್ಯೆ ಒಂದು ರೀತಿಯ ವಿಶೇಷವಾದ ಪ್ರೀತಿ ವಾತ್ಸಲ್ಯವಿರುತ್ತದೆ..  ಹಿರಿಯ ನಟಿ ಶ್ರುತಿ ಅವರ ಮಗಳು ಗೌರಿ ತಮ್ಮ ತಂದೆಯನ್ನು ನೆನಪಿಸಿಕೊಂಡು ಒಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಅಪ್ಪನ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ ಪೋಸ್ಟ್ ಅದಾಗಿತ್ತು.. ಎರಡು ದಿನಗಳ ಹಿಂದೆ ಗೌರಿ ಅಪ್ಪ ಎಸ್.ಮಹೇಂದರ್ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ತಂದೆಯನ್ನು ನೆನಪಿಸಿಕೊಂಡು ಅವರ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಬರೆದುಕೊಂಡಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು ಅಪ್ಪ.. ನೀವು ನನ್ನ ಮೊದಲ ಪ್ರೀತಿ ಮತ್ತು ನನ್ನ ನೆಚ್ಚಿನ ಹೀರೋ ಆಗಿದ್ದೀರಿ… ನಿಮ್ಮ ಮೇಲಿನ ಪ್ರೀತಿ ಹಾಗೂ ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ನಿಮ್ಮ ಜೊತೆ ಕಾಲ ಕಳೆಯಲು ಕಾಯುತ್ತೀದ್ದೀನಿ” ಎಂದು ಪ್ರೀತಿಯಿಂದ ಬರೆದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ತಮ್ಮ ತಂದೆ ಜೊತೆಗಿದ್ದ ಫೋಟೋವನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ರೀತಿಯಲ್ಲಿ ಇವರದ್ದು ಕೂಡ ಆಗಿದೆ.

Edited By

Manjula M

Reported By

Manjula M

Comments