ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿಯಿಂದ ಹೊರಬಂದ ಗುರುಮೂರ್ತಿ..!! ಕಾರಣ ಏನ್ ಗೊತ್ತಾ..?

03 Jun 2019 12:03 PM | Entertainment
591 Report

ಕೆಲವೊಂದು ಧಾರವಾಹಿಗಳು  ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿರುತ್ತವೆ. ತಮ್ಮ ಮನೆಯಲ್ಲಿ ನಡೆಯುತ್ತಿರುವ ದೃಶ್ಯಗಳೇನೋ ಎನ್ನುವಷ್ಟರ ಮಟ್ಟಿಗೆ ಧಾರವಾಹಿಗಳಿಗೆ ಅಡಿಟ್ ಆಗಿ ಬಿಡುತ್ತಾರೆ.. ಧಾರವಾಹಿಗಳ ಪಾತ್ರಗಳನ್ನು ತುಂಬಾ ಇಷ್ಟ ಪಡುತ್ತಾರೆ. ಅದೇ ರೀತಿ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹೆಂಗಳೆಯರ ಮೆಚ್ಚಿನ ಧಾರವಾಹಿ ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿಯಿಂದ ನಾಯಕ ನಟ ಭವಾನಿ ಸಿಂಗ್ ಇದೀಗ ಹೊರಬಂದಿದ್ದಾರೆ.

ಸುಬ್ಬಲಕ್ಷ್ಮಿ ಗಂಡನ ಪಾತ್ರ ಮಾಡುತ್ತಿದ್ದ ಗುರುಮೂರ್ತಿ ಅಲಿಯಾಸ್ ಭವಾನಿ ಸಿಂಗ್ ಧಾರವಾಹಿಯಿಂದ ಹೊರ ನಡೆದಿದ್ದಾರೆ. ಮೂಲಗಳ ಪ್ರಕಾರ ಕೆಲ ವರ್ಷಗಳಿಂದ ಬಿಡುವಿಲ್ಲದೇ ಧಾರವಾಹಿಗಳಲ್ಲಿ ಮಾಡುತ್ತಿದ್ದ ಭವಾನಿ ಸಿಂಗ್ ಬ್ರೇಕ್ ಬೇಕು ಎಂಬ ಕಾರಣಕ್ಕೆ ಧಾರವಾಹಿಯಿಂದ ಹೊರನಡೆಯಲು ನಿರ್ಧಾರ ಮಾಡಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರದಲ್ಲಿ ಸುಬ್ಬಕ್ಕನ ಪಾತ್ರದಷ್ಟೇ ಗುರುಮೂರ್ತಿ ಪಾತ್ರಕ್ಕೂ ಕೂಡ ಸಾಕಷ್ಟು ಅಭಿಮಾನಿಗಳಿದ್ದರು.. ಪತ್ನಿಯಿದ್ದರೂ ಬೇರೆ ಹುಡುಗಿ ಜತೆ ಸಂಬಂಧವಿಟ್ಟುಕೊಂಡ ಪಾತ್ರವಾದರೂ ಗುರುಮೂರ್ತಿ ಎಂದರೆ ಸಾಕಷ್ಟು ಅಭಿಮಾನಿಗಳಿಗೆ ಅಚ್ಚುಮೆಚ್ಚಾಗಿದ್ದರು. ಆದರೆ ಈಗ ಭವಾನಿ ಸಿಂಗ್ ಸ್ಥಾನಕ್ಕೆ ಬೇರೊಬ್ಬ ನಟ ಗುರುಮೂರ್ತಿಯಾಗಿ ಬರಬೇಕಿದೆ. ಮುಂದೆ ಗುರುಮೂರ್ತಿಯನ್ನು ಇಷ್ಟ ಪಡುವ ರೀತಿಯಲ್ಲಿಯೇ ಅಭಿಮಾನಿಗಳು ಬೇರೆ ಪಾತ್ರಧಾರಿಯನ್ನು ಇಷ್ಟ ಪಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments

Cancel
Done