ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಕನ್ನಡದ ಸ್ಟಾರ್ ನಟ..!! ಯಾರ್ ಗೊತ್ತಾ..?

01 Jun 2019 4:38 PM | Entertainment
255 Report

ಸ್ಯಾಂಡಲ್ ವುಡ್ ನಲ್ಲಿ ಕರಿ ಚಿರತೆ ಅಂತಾನೇ ಫೇಮಸ್ ಆಗಿರುವ ದುನಿಯಾ ವಿಜಯ್ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ವಿಜಿಯ ಮುಂದಿನ ಸಿನಿಮಾದ ಸಲಗ ಚಿತ್ರತಂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ದುನಿಯಾ ವಿಜಯ್ ತಮ್ಮ ಮುಂಬರುವ ‘ಸಲಗ’ ಚಿತ್ರತಂಡದ ಜೊತೆ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದು, ಈಗ ಈ ಫೋಟೋಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಆದರೆ ದುನಿಯಾ ವಿಜಯ್ ಭೇಟಿ ಮಾಡಿದ್ದು ಯಾಕೆ ಎಂಬ ವಿಷಯವನ್ನು ಹೇಳಿಕೊಂಡಿಲ್ಲ.

ದುನಿಯಾ ವಿಜಯ್ ತನ್ನ ಟ್ವಿಟ್ಟರಿನಲ್ಲಿ  ಸಲಗ ಚಿತ್ರತಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆದ ಕ್ಷಣ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ ಸಲಗ ಚಿತ್ರದ ಫೋಟೋಗಳು ಸೋಷಿಯಲ್ ಮಿಡೀಯಾದಲ್ಲಿ  ವೈರಲ್ ಆಗಿತ್ತು. ಈ ಸಿನಿಮಾಗೆ ರಘು ಶಿವಮೊಗ್ಗ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದು,  ಕೆ.ಪಿ ಶ್ರೀಕಾಂತ್ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇನ್ನೂ ಈ ಸಿನಿಮಾಕ್ಕೆ  ಚರಣ್ ರಾಜ್ ಹಿನ್ನೆಲೆ ಸಂಗೀತ ನೀಡಲಿದ್ದು, ನವೀನ್ ಸಜ್ಜು ಸಂಗೀತ ನಿರ್ದೇಶಕರಾಗಿ ಹೊಸ ಟ್ರೆಂಡ್ ಸೆಟ್ ಮಾಡಲು ತಯಾರಿ ಪ್ರಾರಂಭ ಮಾಡಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ಯಾಕೆ ಎಂಬುದನ್ನು ತಿಳಿಸಿಲ್ಲ..

Edited By

Manjula M

Reported By

Manjula M

Comments