ಚಿತ್ರಿಕರಣದ ವೇಳೆ ಕುಸಿದು ಬಿದ್ದ ‘ಟಗರು’ ಸಿನಿಮಾ ನಟಿ..!!

01 Jun 2019 10:30 AM | Entertainment
704 Report

ಸಾಕಷ್ಟು ಬಾರೀ ಚಿತ್ರಿಕರಣದ ಸಮಯದಲ್ಲಿ ಅನೇಕ ರೀತಿಯ ಕಹಿ ಘಟನೆಗಳು ನಡೆಯುತ್ತಿರುತ್ತವೆ..ಅದೇ ರೀತಿಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದಲ್ಲಿ ಕಾನ್ಸ್ ಟೇಬಲ್ ಸರೋಜಾ ಪಾತ್ರದಲ್ಲಿ ಮಿಂಚಿದ ನಟಿ ತ್ರಿವೇಣಿ ಸಿನಿಮಾ ಚಿತ್ರೀಕರಣ ವೇಳೆಯಲ್ಲಿಯೇ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಟಗರು ಸಿನಿಮಾ ತ್ರಿವೇಣಿಗೆ ಹೆಸರು ತಂದು ಕೊಟ್ಟಿತ್ತು, ಟೇಬಲ್ ಸರೋಜಾ ಅಂತಾನೇ ಫೇಮಸ್ ಆಗಿದ್ದರು..

ರಕ್ಷ್ ತೀರ್ಥ ಆ್ಯಕ್ಷನ್ ಕಟ್  ಹೇಳುತ್ತಿರುವ 'ಅಲ್ಲೇ ಡ್ರಾ ಅಲ್ಲೇ ಬಹುಮಾನ'  ಎಂಬ ಹಾರರ್ ಸಿನಿಮಾದ ಚಿತ್ರೀಕರಣ ಸಕಲೇಶಪುರದಲ್ಲಿ ನಡೆಯುತ್ತಿತ್ತು..  ಶುಕ್ರವಾರ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ತ್ರಿವೇಣಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಚಿತ್ರತಂಡದವರು ಅವರನ್ನು ಆರೈಕೆ ಮಾಡಿದ್ದು, ಅವರು ಚೇತರಿಸಿಕೊಂಡಿದ್ದು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ. 'ಟಗರು' ಚಿತ್ರದ ಕಾನ್ಸ್ ಟೇಬಲ್ ಸರೋಜಾ ಪಾತ್ರದ ಮೂಲಕ ತ್ರಿವೇಣಿ ಖ್ಯಾತರಾಗಿದ್ದು, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ತ್ರಿವೇಣಿ ಆರೋಗ್ಯವಾಗಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ

Edited By

Manjula M

Reported By

Manjula M

Comments