ಬಿಕ್ಕಿಬಿಕ್ಕಿ ಅತ್ತ ರಾಖಿ ಸಾವಂತ್ ..!! ಕಾರಣವೇನು ಗೊತ್ತಾ..?

31 May 2019 9:57 AM | Entertainment
83 Report

ಸ್ಟಾರ್ಸ್’ಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.. ಒಂದಲ್ಲ ಒಂದು ವಿಷಯದಲ್ಲಿ ಸಖತ್ ಸದ್ದು ಮಾಡುತ್ತಿರುತ್ತಾರೆ… ಅದರಲ್ಲಿ ರಾಕಿ ಸಾವಂತ್ ಕೂಡ ಒಬ್ಬರು.. ರಾಕಿ ಸಾವಂತ್ ಅನ್ನು ಬಾಲಿವುಡ್ ಡ್ರಾಮ ಕ್ವೀನ್ ಅಂತಾನೇ ಕರೆಯುತ್ತಾರೆ.. ಸದ್ದು ಮಾಡುತ್ತಾ ಸುದ್ದಿಯಲ್ಲಿರಲು ಬಾರೀ ಕರಸತ್ತು ಮಾಡುತ್ತಾರೆ. ಆಗಾಗ ಹಾಟ್ ಫೋಟೋ, ವಿಡಿಯೋ, ಕಮೆಂಟ್ ಮೂಲಕ ಸೋಷಿಯಲ್ ಮಿಡೀಯಾದಲ್ಲಿ ಸುದ್ದಿಯಲ್ಲಿ ಇರುತ್ತಾಳೆ.. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ರಾಖಿ ಸಾವಂತ್ ವಿಡಿಯೋ ಒಂದು ಸಖತ್ ವೈರಲ್ ಆಗಿದೆ.

ಹಾಟ್ ಪೋಟೋಗಳನ್ನು ಹಾಕಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದ ರಾಕಿ ಈ ಬಾರಿ ತನ್ನ ಕಷ್ಟದ ದಿನಗಳನ್ನು ಎಲ್ಲರ ಮುಂದಿಟ್ಟಿದ್ದಾಳೆ. ರಾಖಿ ಸಾವಂತ್ ಬಾಲಿವುಡ್ ಗೆ ಬರುವ ಮೊದಲು ಸಾಕಷ್ಟು ಕಷ್ಟ ಅನುಭವಿಸಿದ್ದಾಳಂತೆ. ರಾಖಿ ಸಾವಂತ್ ಮೊದಲ ಹೆಸರು ನೀರು ಎಂದಾಗಿತ್ತು. ರಾಖಿ ತಾಯಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡ್ತಿದ್ದರಂತೆ. ಜನರು ಬಿಟ್ಟ ಆಹಾರವನ್ನು ರಾಖಿ ತಿನ್ನುತ್ತಿದ್ದಳಂತೆ. ರಾಖಿ ಸಾವಂತ್ ಬಾಲಿವುಡ್ ಗೆ ಎಂಟ್ರಿ ನೀಡುವ ಮೊದಲು ಅನೇಕ ಆಡಿಷನ್ ನಲ್ಲಿ ಪಾಲ್ಗೊಂಡಿದ್ದಳಂತೆ. ನಿರ್ದೇಶಕರು ಹಾಗೂ ನಿರ್ಮಾಪಕರು ಟ್ಯಾಲೆಂಟ್ ಪ್ರದರ್ಶನ ಮಾಡುವಂತೆ ಹೇಳ್ತಿದ್ದರಂತೆ. ಆಗ ಟ್ಯಾಲೆಂಟ್ ಅಂದ್ರೆ ಏನು ಎಂಬುದು ಗೊತ್ತಾಗುತ್ತಿರಲಿಲ್ಲ ಎಂದು ರಾಖಿ ಹೇಳಿದ್ದಾಳೆ. ಫೋಟೋ ತೆಗೆದುಕೊಂಡು ಒಳಗೆ ಹೋದಾಗ ನಿರ್ದೇಶಕರು ರೂಮಿನ ಬಾಗಿಲು ಹಾಕುತ್ತಿದ್ದರಂತೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬರ್ತಿದ್ದಳಂತೆ ರಾಖಿ. ಇದನ್ನೆಲ್ಲ ನೆನೆದು ಅತ್ತಿದ್ದಾಳೆ ರಾಕಿ ಸಾವಂತ್.. ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ಕಹಿ ಘಟನೆಗಳು ಇದ್ದೆ ಇರುತ್ತವೆ.. ಆ ನೆನಪುಗಳನ್ನು ಕೆಲವೊಂದು ಬಾರಿ ಮಾತ್ರ ನೆನಪಿಸಿಕೊಳ್ಳಬೇಕಾಗುತ್ತದೆ.. ರಾಕಿ ಮಾಡಿರೋದು ಕೂಡ ಅದೇ ಕೆಲಸವನ್ನು.

Edited By

Manjula M

Reported By

Manjula M

Comments