ಸೀಮಂತದ ಖುಷಿಯಲ್ಲಿರುವ ಕುಲವಧು ಖ್ಯಾತಿಯ ನಟಿ..!!

30 May 2019 4:08 PM | Entertainment
2667 Report

ಇತ್ತಿಚಿನ ದಿನಗಳಲ್ಲಿ ಬಣ್ಣದ ಲೋಕದ ನಟಿ ಮಣಿಯರು ಫುಲ್ ಖುಷಿಯಲ್ಲಿದ್ದಾರೆ. ಕೆಲವರು ಮದುವೆ ಆಗೋ ಖುಷಿಯಲ್ಲಿದ್ದಾರೆ ಮತ್ತೆ ಕೆಲವರು ಹೊಸ ಅಥಿತಿಯ ಆಗಮನದಲ್ಲಿ ಇದ್ದಾರೆ. ಇದೀಗ ಕಿರುತೆರೆಯ ಫೇಮಸ್ ಸೀರಿಯಲ್ ಆದ ಕುಲವಧು ಖ್ಯಾತಿಯ ದಿಶಾ ಮದನ್ ಸೀಮಂತದ ಸಂಭ್ರಮದಲ್ಲಿ ಇದ್ದಾರೆ..  ‘ಕುಲವಧು’ ಮೂಲಕ ಜರ್ನಿ ಶುರುಮಾಡಿದ ದಿಶಾ ಮದನ್ ಸೋಷಿಯಲ್ ಮಿಡೀಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ..

ಕೆಲ ತಿಂಗಳುಗಳ ಹಿಂದೆ ‘We are Pregnant’ ಎಂದು ಹೇಳುವ ಮೂಲಕ ಗುಡ್ ನ್ಯೂಸ್ ಹಂಚಿಕೊಂಡಿದ್ದರು. ಇತ್ತೀಚಿಗಷ್ಟೆ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದು ಫೋಟೋಗಳು ಸೋಷಿಯಲ್ ಮಿಡೀಯಾದಲ್ಲಿ ವೈರಲ್ ಆಗುತ್ತಿದೆ. ಮಾಡರ್ನ್ ಮತ್ತು  ಸಾಂಪ್ರದಾಯಿಕವಾಗಿ ಸೀಮಂತ ಮಾಡಿಕೊಂಡಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿ ಮೈಸೂರಿನ ಹರಿಕಥೆ ಹಾಡುವರು ಹಾಗೂ ಬಳೆಗಾರರು ಹೆಚ್ಚು ಬೆರಗು ತಂದಿದ್ದಾರೆ. ಸದ್ಯಕ್ಕೆ 7 ನೇ ತಿಂಗಳಲ್ಲಿರುವ ದಿಶಾ ಆಗಸ್ಟ್ ನಲ್ಲಿ ಅತಿಥಿ ಆಗಮನಕ್ಕೆ ಕಾಯುತ್ತಿದ್ದಾರೆ. ಕಿರುತೆರೆ ನಟಿ ತಾಯಿಯಾಗುವ ಸಂಭ್ರಮದಲ್ಲಿ ಇದ್ದಾರೆ.

Edited By

Manjula M

Reported By

Manjula M

Comments