ಸ್ಯಾಂಡಲ್​ವುಡ್​ ನಟಿಯೊಂದಿಗೆ ತಳುಕು ಹಾಕಿಕೊಂಡಿದ್ಯಾ ಕ್ರಿಕೆಟರ್ ರಾಹುಲ್ ಹೆಸರು..!?

29 May 2019 5:49 PM | Entertainment
2295 Report

ಸೆಲೆಬ್ರೆಟಿಗಳ ಹೆಸರು ಆಗ್ಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ…ಇದೀಗ ಬಾಲಿವುಡ್ ನ ನಟಿಯೊಬ್ಬಳ ಹೆಸರು ಕನ್ನಡಿಗ ಕ್ರಿಕೇಟರ್ ಜೊತೆ ತಳುಕು ಹಾಕಿಕೊಂಡಿದೆ.. ಒಂದು ಕಡೆ ವಿಶ್ವಕಪ್​ಗಾಗಿ ಭರ್ಜರಿ ತಯಾರಿಯಲ್ಲಿರುವ ಕೆ.ಎಲ್​ ರಾಹುಲ್ ಹೆಸರು ನಟಿ ಸೋನಾಲ್ ಚೌಹಾಣ್ ಜೊತೆ ಕೇಳಿ ಬರುತ್ತಿದೆ. 'ಜನ್ನತ್', 'ಬುಡ್ಡಾ ಹೋಗ ತೆರಾ ಬಾಪ್' ಸೇರಿದಂತೆ ಅನೇಕ ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಸೋನಾಲ್  ಹೆಸರು ಸದ್ಯ ರಾಹುಲ್ ಜೊತೆ ತಳುಕು ಹಾಕಿಕೊಂಡಿದೆ.. ಈ ರೀತಿಯ ಗಾಸಿಪ್​ಗಳು ಬಿಟೌನ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ..

ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನಾಲ್, ಡೇಟಿಂಗ್ ಮ್ಯಾಟರ್​ನ್ನು ನಿರಾಕರಿಸಿದ್ದಾರೆ.. ಅಷ್ಟೆ ಅಲ್ಲದೆ ರಾಹುಲ್ ಓರ್ವ ಅತ್ಯುತ್ತಮ ಕ್ರಿಕೆಟಿಗ. ಪ್ರತಿಭಾವಂತ ವ್ಯಕ್ತಿಯಲ್ಲದೆ ಒಳ್ಳೆಯ ಹುಡುಗ ಅಂತ ಮೆಚ್ಚುಗೆಯ ಮಾತುಗಳನ್ನು ಹಾಡಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ 'ಚೆಲುವೆ ನಿನ್ನ ನೋಡಲು' ಸಿನಿಮಾ ಮೂಲಕ ಸೋನಾಲ್ ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡ ನಟಿಯೊಂದಿಗೆ  ರಾಹುಲ್ ಹೆಸರು ಕೇಳಿ ಬಂದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇದೇನು ಹೊಸದಲ್ಲ...ಸಾಕಷ್ಟು ಸೆಲಬ್ರೆಟಿಗಳ ಹೆಸರು ಆಗಾಗ ಮತ್ತೊಬ್ಬ ಸೆಲಬ್ರೆಟಿಯ ಜೊತೆ ತಳುಕು ಹಾಕಿಕೊಂಡಿರುತ್ತದೆ.

Edited By

Manjula M

Reported By

Manjula M

Comments