‘ಸೆಂಡ್ ನ್ಯೂಡ್ಸ್’ ಎಂದ ಅಭಿಮಾನಿಗೆ ಗಾಯಕಿ ಕಳುಹಿದ ಆ ಪೋಟೋ ಯಾವುದು ಗೊತ್ತಾ..?

27 May 2019 3:32 PM | Entertainment
183 Report

ಸೆಲಬ್ರೆಟಿಗಳನ್ನು ಕಾಮನ್ ಪೀಪಲ್ಸ್ ಇಷ್ಟ ಪಡೋದು ಕಾಮನ್.. ಅದೇ ರೀತಿಯಾಗಿ ಅವರ ಪೋಟೋಗಳಿಗೆ ಕಾಮೆಂಟ್ ಮಾಡುವುದು ಕೂಡ ಕಾಮನ್...ಅದೇ ರೀತಿಯಾಗಿ ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿ ಚಿನ್ಮಯಿ ಶ್ರೀಪಾದಗೆ ಅಭಿಮಾನಿಯೊಬ್ಬ ನ್ಯೂಡ್ ಫೋಟೋ ಕಳುಹಿಸಿ ಎಂದು ಕೇಳಿಕೊಂಡಿದ್ದಾನೆ. ಅಭಿಮಾನಿಯ ಆ ಪ್ರಶ್ನೆಗೆ ಗಾಯಕಿ ಕೊಟ್ಟ ಉತ್ತರ ಕೇಳುದ್ರೆ ಶಾಕ್ ಆಗ್ತೀರಾ..?

ಅಭಿಮಾನಿಯ ಕೋರಿಕೆಗೆ ಗಾಯಕಿ ಚಿನ್ಮಯಿ ಲಿಪ್‍ಸ್ಟಿಕ್ ಫೋಟೋ ಕಳುಹಿಸುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ. ನ್ಯೂಡ್ ಚಿತ್ರ ಕೇಳಿದ ಅಭಿಮಾನಿಯ ಮೆಸೇಜ್‍ನ ಸ್ಕ್ರೀನ್‍ಶಾಟ್ ತೆಗೆದು ಅದನ್ನು ಚಿನ್ಮಯಿ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಸ್ಕ್ರೀನ್‍ಶಾಟ್ ಫೋಟೋ ಹಾಕಿ ಅದಕ್ಕೆ, “ಸ್ವಲ್ಪ ತಮಾಷೆಗಾಗಿ” ಎಂದು ಬರೆದುಕೊಂಡಿದ್ದಾರೆ. ಅಭಿಮಾನಿ ನ್ಯೂಡ್ ಫೋಟೋ ಕೇಳಿದಕ್ಕೆ ಚಿನ್ಮಯಿ ನ್ಯೂಡ್ ಲಿಪ್‍ಸ್ಟಿಕ್ ಫೋಟೋವನ್ನು ಕಳುಹಿಸಿದ್ದಾರೆ. ಅಷ್ಟೆ ಅಲ್ಲದೆ ಇದು ನನ್ನ ಫೆವರೇಟ್ ನ್ಯೂಡ್” ಎಂದು ಮೆಸೇಜ್ ಮಾಡುವ ಮೂಲಕ ಗಾಯಕಿ ಚಿನ್ಮಯಿ ಜಾಣತನದಿಂದ ಅಭಿಮಾನಿಗೆ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಚಿನ್ಮಯಿ ಅವರ ಖಡಕ್ ಉತ್ತರಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಗಾಯಕಿಯ ಈ ಜಾಣತನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Edited By

Manjula M

Reported By

Manjula M

Comments