'ಅಮರ್' ಚಿತ್ರದಲ್ಲಿ ದರ್ಶನ್ ಪಾತ್ರವೇನು ಗೊತ್ತಾ..?

22 May 2019 5:48 PM | Entertainment
474 Report

ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅಮರ್ ಕೂಡ ಒಂದು.. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಭಿನಯಿಸಿರುವ ಚಿತ್ರ ಇದೇ ತಿಂಗಳು ಮೇ 31 ರಂದು ಬಿಡುಗಡೆಯಾಗಲಿದೆ… ಈ ಸಿನಿಮಾದಲ್ಲಿ ದರ್ಶನ್ ಕೂಡ ಅಭಿನಯಿಸಿದ್ದಾರೆ.. ಹಾಗಾಗಿ ಸಿನಿಮಾದ ಬಗ್ಗೆ ಒಂದಷ್ಟು ಕುತೂಹಲ ಮೂಡಿರೋದಂತು ಸುಳ್ಳಲ್ಲ.. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಿನಿಪ್ರಿಯರಲ್ಲಿ ಒಂದಷ್ಟು ಕುತೂಹಲ ಮೂಡಿದಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದ್ದು, ಇನ್ನೇನಿದ್ದರೂ ಬಾಕ್ಸಾಫೀಸ್​ನ ಲೂಟಿ ಮಾಡೋದು ಒಂದೆ ಕೆಲಸ...

'ಅಮರ್​' ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಇರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಮತ್ತುಷ್ಟು ಹೆಚ್ಚಾಗಿದೆ.. 'ಜೋರು ಪಾಟು..' ಎಂಬ ಡಿಸ್ಕೋಥಿಕ್ ಗೀತೆಯಲ್ಲಿ ದರ್ಶನ್ ಕಾಣಿಸಿಕೊಳ್ಳಲಿರುವುದುಈಗಾಗಲೇ ಎಲ್ಲರಿಗೂ ಗೊತ್ತಾಗಿದೆ.. ಆದರೆ ಸಿನಿಮಾದಲ್ಲಿ ದರ್ಶನ್ ಪಾತ್ರವೇನು ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ,,, ಈ ವಿಷಯದ ಬಗ್ಗೆ  ಮೊದಲಿನಿಂದಲೂ  ಯಾವುದೇ ಗುಟ್ಟು ಬಿಟ್ಟು ಕೊಡದ ಅಮರ್ ಸಿನಿಮಾದ ನಿರ್ದೇಶಕ ನಾಗಶೇಖರ್, ದರ್ಶನ್ ಪಾತ್ರ ಯಾವ ರೀತಿ ಇರಲಿದೆ ಎಂಬ ಸಣ್ಣ  ಸುಳಿವನ್ನು ನೀಡಿದ್ದಾರೆ. ಸಿನಿಮಾದ ಪ್ರಮುಖ ಘಟ್ಟದಲ್ಲಿ ಮಲ್ಟಿ ಮಿಲಿಯನೇರ್​ ಆಗಿ ದರ್ಶನ್ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.. . ದರ್ಶನ್ ಎಂಟ್ರಿ ಬಳಿಕ ಚಿತ್ರಕ್ಕೊಂದು ತಿರುವು ಸಿಗಲಿದ್ದು, ಉಳಿದೆಲ್ಲವೂ ಸಸ್ಪೆನ್ಸ್ ಆಗಿಯೇ ಉಳಿಸಿದೆ ಚಿತ್ರತಂಡ.. ಅಮರ್ ಸಿನಿಮಾ ಎಷ್ಟರ ಮಟ್ಟಿಗೆ ಯಶಸ್ಸನ್ನು ಕಾಣುತ್ತದೆ ಎಂಬುದನ್ನು ಇನ್ನೂ ಸ್ವಲ್ಪ ದಿನ ಕಾದು ನೋಡಬೇಕಿದೆ

Edited By

Manjula M

Reported By

Manjula M

Comments