ಒಟ್ಟಿಗೆ ಕಾಣಿಸಿಕೊಳ್ತಾರಾ ಉಪೇಂದ್ರ ಮತ್ತು ಮಹೇಶ್​ಬಾಬು..!

22 May 2019 2:50 PM | Entertainment
300 Report

ಸ್ಯಾಂಡಲ್ವುಡ್ ನಲ್ಲಿ ಈ ವರ್ಷವೇ ಭರ್ಜರಿ ಸಿನಿಮಾಗಳ ಬಿಡುಗಡೆಯಾಗುತ್ತಿವೆ… ಅದರಲ್ಲಿ  ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್​.ಚಂದ್ರು ಕಾಂಬಿನೇಷನ್ ಬಹುನಿರೀಕ್ಷಿತ ‘ಐಲವ್​ಯೂ’ ಸಿನಿಮಾ ಕೂಡ ಒಂದು…  ಈ ಚಿತ್ರವು ಟ್ರೈಲರ್ ಹಾಗೂ ಹಾಡುಗಳಿಂದಲೇ ಹೆಚ್ಚು ಸದ್ದು ಮಾಡಿತ್ತು. ಸಿನಿಂಆ ಬಿಡುಗಡೆಯಾಗುವುದಕ್ಕೆ ಇನ್ನೂ ಕೆಲವು  ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ತೆಲುಗಿನಲ್ಲಿ ಆಡಿಯೋ ಬಿಡುಗಡೆಗೆ ಮುಂದಾಗಿದೆ.  

ಗ್ರ್ಯಾಂಡ್‌ ಆಗಿ ಜೂನ್.8 ಕ್ಕೆ ವಿಶಾಖಪಟ್ಟಣದಲ್ಲಿ ‘ಐಲವ್​ಯೂ’  ಸಿನಿಮಾದ ಆಡಿಯೋ ಸಮಾರಂಭ ನಡೆಯಲಿದ್ದು ಅತಿಥಿಯಾಗಿ ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಬರಲಿದ್ದಾರೆ ಅನ್ನೋದೆ ಮತ್ತೊಂದು ವಿಶೇಷವಾಗಿದೆ.. ಈ ವಿಷಯಕ್ಕಾಗಿಯೇ ಪ್ರಿನ್ಸ್ ಮಹೇಶ್‌ಬಾಬು ಹಾಗೂ ರಿಯಲ್ ಸ್ಟಾರ್ ಉಪ್ಪಿನ ಒಂದೇ ವೇದಿಕೆಯಲ್ಲಿ ನೋಡೋ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ... ಹಾಗೆ ನೋಡಿಕೊಂಡರೆ ಉಪ್ಪಿಗೆ ಟಾಲಿವುಡ್ ಜೊತೆ ಉತ್ತಮ ನಂಟಿದೆ ಎನ್ನಬಹುದು... ಹಾಗಾಗಿ ಆಡಿಯೋ ಬಿಡುಗಡೆಗೆ ಪ್ರಿನ್ಸ್ ಗೆ ಆಹ್ವಾನ ನೀಡಿದ್ದಾರಂತೆ.. ಇನ್ನೂ ಈ ಸಿನಿಮಾದಲ್ಲಿ ರಚಿತ ರಾಮ್ ಉಪ್ಪಿ ಜೊತೆ ಸ್ಕ್ರೀನ್ ಷೇರ್ ಮಾಡಿದ್ದಾರೆ.. ಇವರಿಬ್ಬರ ಕಾಂಬೀನೇಷನ್ ತೆರೆ ಮೇಲೆ ಹೇಗೆ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Edited By

Manjula M

Reported By

Manjula M

Comments