ನಟಿಯನ್ನೆ ಮದುವೆಯಾಗುತ್ತೇನೆ ಎಂದ ನಟಿ, ನಟನೆಗೆ ಗುಡ್ ಬೈ ಹೇಳಿದ್ಯಾಕೆ..!?

22 May 2019 9:36 AM | Entertainment
333 Report

ಇತ್ತಿಚಿಗೆ ಸಲಿಂಗಕಾಮಿಗಳ ಮದುವೆ ಹೆಚ್ಚಾಗಿಯೇ ನಡೆಯಿತ್ತಿದೆ.. ಮೊದಲು ಹುಡುಗ ಹುಡುಗಿ  ಮದುವೆಯಾಗುತ್ತಿದ್ದರು.. ಆದರೆ ಕಾಲ ಬದಲಾದಂತೆ ಮದುವೆಯ ವಿಷಯದಲ್ಲೂ ಕೂಡ ಬದಲಾವಣೆ ಬಂದಿದೆ… ಗಂಡು ಹೆಣ್ಣು ಮದುವೆಯಾಗುತ್ತಿದ್ದರು ಆದರೆ ಇದೀಗ ಹುಡುಗ ಹುಡುಗನನ್ನೆ ಮದುವೆಯಾಗುವುದು, ಹುಡುಗಿ ಹುಡುಗಿಯನ್ನೆ ಮದುವೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ.. ಇದೀಗ ಈ ವಿಷಯದಲ್ಲಿ ನಟಿಯರಿಬ್ಬರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ.. ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಮನಗೆದ್ದಿರುವ ತ್ರಿಷಾ ಕೃಷ್ಣನ್ ಸ್ವಲ್ಪ ದಿನಗಳ ಹಿಂದೆ ಚಾರ್ಮಿ ಕೌರ್ ಅವರನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದರು..

ಚಾರ್ಮಿ ಕೌರ್ , ತ್ರಿಷಾ ಕೃಷ್ಣನ್ ಜೊತೆಗೆ ತಬ್ಬಿಕೊಂಡು ಮುತ್ತಿಕ್ಕುತ್ತಿರುವ ಫೋಟೋ ಪ್ರಕಟಿಸಿ 'ಐ ಲವ್ ಯೂ ಬೇಬಿ. ನನ್ನ ಪ್ರಪೋಸಲ್ ಗೆ ನಿನ್ನ ಒಪ್ಪಿಗೆಗಾಗಿ ಮಂಡಿಯೂರಿ ಕಾಯುತ್ತಿದ್ದೇನೆ. ನಿನಗೆ ಗೊತ್ತು ಈಗ ಇದು ಕಾನೂನು ಪ್ರಕಾರವೂ ನಿಷಿದ್ಧವೇನಲ್ಲ. ನಾವು ಮದುವೆಯಾಗೋಣ' ಎಂದು ಚಾರ್ಮಿ ಟ್ವೀಟ್ ಮಾಡಿದ್ದರು... ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. 'ಥ್ಯಾಂಕ್ಯೂ ಮತ್ತು ನಿನಗೆ ನಾನು ಈಗಾಗಲೇ ಒಪ್ಪಿಗೆ ನೀಡಿದ್ದೇನೆ' ಎಂದು ತ್ರಿಷಾ ಪ್ರತಿಕ್ರಿಯಿಸಿದ್ದರು.  ಇದೀಗ ಚಾರ್ಮಿ ಕೌರ್ ಅಭಿನಯಕ್ಕೆ ಗುಡ್ ಬೈ ಹೇಳಿದ್ದಾರೆ..32 ವರ್ಷದ ಹುಟ್ಟಹಬ್ಬವನ್ನು ಆಚರಿಸಿಕೊಳ್ಳುವ ವೇಳೆಯಲ್ಲಿ ಇನ್ಮುಂದೆ ನಟನೆ ಮಾಡುವುದಿಲ್ಲ.. ಕೇವಲ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ. ಒಂದು ವೇಳೆ ಚಾರ್ಮಿ ಮತ್ತು ತ್ರಿಶಾ ಮದುವೆಯಾದರೆ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ…

Edited By

Manjula M

Reported By

Manjula M

Comments