ನವರಸ ನಾಯಕ ಜಗ್ಗೇಶ್ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಏನಂತ ಕರೆಯುತ್ತಿದ್ದರು ಗೊತ್ತಾ..?

21 May 2019 5:53 PM | Entertainment
356 Report

ಸ್ಯಾಂಡಲ್ ವುಡ್ ನಲ್ಲಿ ಆಗಿಂದಾಗೆ ಸ್ಟಾರ್ ವಾರ್ ಆಗುತ್ತಲೆ ಇರುತ್ತದೆ ಎನ್ನುವುದು ಗಾಂಧಿನಗರದ ಮಾತಾಗಿದೆ…ಆದ್ರೆ ಇಂದಿನ ಕಾಲದಲ್ಲಿ ಹೀಗಿರಲಿಲ್ಲ.. ಒಬ್ಬರನ್ನೊಬ್ಬರು ನಟರು ತುಂಬಾ ಪ್ರೀತಿಸುತ್ತಿದ್ದರು… ತುಂಬಾ ಅಭಿಮಾನದಿಂದ ಇರುತ್ತಿದ್ದರು..ಈಗ ನಾವು ಹೇಳಲು ಹೊರಟಿದರು..ನವರಸ ನಾಯಕ ಜಗ್ಗೇಶ್ ಬಗ್ಗೆ.. ನವರಸ ನಾಯಕ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯವಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಜಗ್ಗೇಶ್ ಯಾವಾಗಲೂ ಸಕ್ರಿಯವಾಗಿರುತ್ತಾರೆ. ತಮ್ಮ ಅಭಿಮಾನಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ತಮಗೆ ಏನು ಅನಿಸುತ್ತದೆಯೋ ಅದನ್ನೆ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿರುತ್ತಾರೆ..

ಜಗ್ಗೇಶ್​ ಅವರು ದೂರದರ್ಶನ ನೋಡುವಾಗ ಆಕಸ್ಮಿಕವಾಗಿ ಅವರಿಗೆ ರಾಜ್​ಕುಮಾರ್ ಹಾಗೂ ವಿಷ್ಣುವರ್ಧನ್ ಅಭಿನಯದ 'ಗಂಧದಗುಡಿ' ಚಿತ್ರದ ಕ್ಲೈಮ್ಯಾಕ್ಸ್​ ಕಣ್ಣಿಗೆ ಬಿತ್ತಂತೆ. ಅದರ ಲಿಂಕ್​ ಜತೆಗೆ ಅದರಲ್ಲಿ ಅಭಿನಯಿಸಿರುವ ನಟರ ಬಗ್ಗೆ ಬರೆದುಕೊಂಡಿದ್ದಾರೆ. ಜಗ್ಗೇಶ್​ ಅವರ ಈ ಟ್ವೀಟ್​ಗೆ ಅಭಿಮಾನಿಯೊಬ್ಬರು ವಿಷ್ಣುವರ್ಧನ್​ ಅವರ ಬಗ್ಗೆ ಪ್ರಶ್ನೆ ಕೇಳಿದ್ದು, ನೀವು ಕಂಡಂತೆ ಒಂದೇ ಒಂದು ಪದದಲ್ಲಿ ವಿಷ್ಣು ಹೇಗಿದ್ದರು? ನೀವು ಅವರನ್ನು ಏನೆಂದು ಕರೆಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.ನವರಸ ನಾಯಕ ಜಗ್ಗೇಶ್ ಅದಕ್ಕೆ ಪ್ರತಿಕ್ರಿಯಿಸಿ ವಿಷ್ಣು ಅವರನ್ನ ಸಾರ್ ಎಂದು ಕರೆಯುತ್ತಿದ್ದೆ. ನಾವಿಬ್ಬರು ಅನೇಕ ಬಾರಿ ಏಕಾಂತದಲ್ಲಿ ಮಾತಾಡಿದ್ದೇವೆ..ಅದರಲ್ಲಿ ತುಂಬ ನೆನಪಿಡುವ ದಿನ ಅವರು ಚಿಕ್ಕಮಗಳೂರು ನಲ್ಲಿ ದ್ವಾರಕೀಶ್ ಚಿತ್ರದಲ್ಲಿ ಅಭಿನಯಿಸುತ್ತಿದ್ದರು ನಾನು ಬೇವುಬೆಲ್ಲ ನಟಿಸುತ್ತಿದ್ದೆ ಇಬ್ಬರು ಒಂದೆ ಲಾಡ್ಜು ಅಂದು ಮನಸೋಇಚ್ಚೆ ಗಂಟೆಗಟ್ಟಲೆ ಇಬ್ಬರು ಮಾತಾಡಿದ್ದೆವು.. ಅವರನ್ನೆಲ್ಲಾ ಕಳೆದುಕೊಂಡು ಚಿತ್ರರಂಗ ತಬ್ಬಲಿಯಾಗಿದೆ..ಎಂದು ಜಗ್ಗೇಶ್ ತಿಳಿಸಿದ್ದಾರೆ.

Edited By

Manjula M

Reported By

Manjula M

Comments