ಸಿನಿಮಾ ಬಿಡುಗಡೆಯಾಗುವ ಮುನ್ನವೇ ಸ್ಟಾರ್ ಆಗಿ ಬಿಟ್ರಾ..ಯಂಗ್ ರೆಬಲ್ ಸ್ಟಾರ್..? ಅಭಿಷೇಕ್ ನ ಮುಂದಿನ ಸಿನಿಮಾ ಯಾವುದು ಗೊತ್ತಾ..?

21 May 2019 5:27 PM | Entertainment
292 Report

ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಮಗ ಯಂಗ್ ರೆಬಲ್ ಸ್ಟಾರ್ ಅಭಿನಯದ ಅಮರ್ ಸಿನಿಮಾ ಸ್ಯಾಂಡಲ್ ವುಡ್’ನ ಬಹು ನಿರೀಕ್ಷಿತ ಸಿನಿಮಾವಾಗಿದೆ. ಅಮರ್ ಸಿನಿಮಾ ಇದೇ ತಿಂಗಳು 31 ಕ್ಕೆ ಬಿಡುಗಡೆಯಾಗಲಿದೆ.. ಚೊಚ್ಚಲ ಸಿನಿಮಾದಲ್ಲಿಯೇ ಅಭಿ ಸಕ್ಸಸ್ ಕಂಡಿದ್ದಾಗಿದೆ ಎಂಬುದು ಹಲವರ ಮಾತು.. ರೆಬಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿ ಎಲ್ಲವನ್ನೂ ಕಲಿತೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ.

ಅಭಿಷೇಕ್ ಅಂಬರೀಶ್ ಚಿತ್ರರಂಗಕ್ಕೆ ಬರ್ತಾರೆ, ಅನ್ನೋ ದಿನದಿಂದಲೇ ಅವರು ಸ್ಟಾರ್ ಆಗುಬಿಟ್ಟರು.. . ಈಗಾಗಲೇ ಟ್ರೈಲರ್​ ಹಾಗೂ ಹಾಡುಗಳ ಮೂಲಕವೇ, 'ಅಮರ್' ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ, ನಿರೀಕ್ಷೆಗಳು ಮೂಡಿವೆ. ಅಭಿ ಭರವಸೆಯ ನಾಯಕನಾಗ್ತಾನೆ ಅನ್ನೋದು ಗಾಂಧಿನಗರದ ಮಾತಾಗಿದೆ.. ಅದಕ್ಕೆ ನಿದರ್ಶನವೆಂಬಂತೆ ಇದೀಗ ಬೇರೆ ಸಿನಿಮಾಗೆ ಸಹಿ ಹಾಕಿದ್ದಾರೆ ಅಭಿ. 'ಅಮರ್' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿಷೇಕ್ ನಟಿಸಿದ್ದಾರೆ. ನಾಗಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಅಭಿಗೆ ಜೋಡಿಯಾಗಿ ತಾನ್ಯಾ ಹೋಪ್ ಅಭಿನಯಿಸಿದ್ದಾರೆ. ಜೊತೆಗೆ ಅರ್ಜುನ್ ಜನ್ಯಾ ಅವರ ಸಂಗೀತದ ಸೊಬಗಿದೆ..ಸತ್ಯಾ ಹೆಗಡೆ ಸಿನಿಮಾದ ಕ್ಯಾಮರಾ ಕೈಚಳಕವಿದೆ.. ಸಿನಿಮಾದಲ್ಲಿ ಪೈಟ್ಸ್, ಒಳ್ಳೆಯ ಹಾಡುಗಳು, ರೊಮ್ಯಾನ್ಸ್ ಎಲ್ಲವೂ ಕೂಡ ಇದೆ… ಸಿನಿಮಾದ ಟ್ರೈಲರ್ ಹಾಡುಗಳನ್ನು ನೋಡಿಯೇ ಚಿತ್ರತಂಡಗಳು ಅಭಿ ಕಾಲ್‍ಶೀಟ್‍ಗೆ ಹಿಂದೆ ಬಿದ್ದಿದ್ದಾರೆ. ಜೊತೆಗೆ ಅಭಿ ಕೂಡ ಮೊದಲ ಸಿನಿಮಾ ತೆರೆಗೆ ಬರುವ ಮೊದಲೇ ಎರಡು ಚಿತ್ರಗಳಿಗೆ ಸಹಿ ಮಾಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟಿಸಿರುವ 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರ ನಿರ್ದೇಶಿಸಿದ್ದರು ಮಹೇಶ್. 2016ರಲ್ಲಿ ತೆರೆಕಂಡ ಆ ಸಿನಿಮಾ ಸೂಪರ್​ ಹಿಟ್​ ಎನಿಸಿಕೊಂಡಿತ್ತು. ಆ ಚಿತ್ರದ ಯಶಸ್ಸಿನ ಬಳಿಕ ಎರಡು ವರ್ಷಗಳ ಕಾಲ ಬ್ರೇಕ್ ಪಡೆದಿದ್ದ ನಿರ್ದೇಶಕ ಮಹೇಶ್ ಈಗ ಅಭಿ ಎರಡನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಭಿ ಜತೆ ಮಾತುಕತೆ ನಡೆದಿದ್ದು, ಪ್ರೀಪ್ರೊಡಕ್ಷನ್ ಕೆಲಸಗಳೂ ಸಾಗಿವೆಯಂತೆ. ಒಟ್ಟಾರೆಯಾಗಿ ಅಭಿಷೇಕ್ ಅಪ್ಪನಂತೆಯೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಾನೆ ಎಂಬುದು ಗಾಂಧಿ ನಗರದ ಮಾತು..

Edited By

Manjula M

Reported By

Manjula M

Comments