26 ರ ನಟಿಯು 68 ರ ನಟನನ್ನು ಮದುವೆಯಾಗ್ತಿದ್ದಾಳೆ.!? ಅಯ್ಯೋ ಯಾರಪ್ಪ ಇದು..?

21 May 2019 4:08 PM | Entertainment
4525 Report

ಸಿನಿಮಾ ಜಗತ್ತಿನಲ್ಲಿ ತುಂಬಾ ಹಿರಿಯರು ಕಿರಿಯರನ್ನು ಮದುವೆಯಾಗುವುದು ಕಾಮನ್… ಅದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ..ಇದೀಗ ಹಾಲಿವುಡ್ ನ ನಟಿ ಇದೇ ಸಾಲಿಗೆ ಸೇರುತ್ತಾರ ಎಂಬ ಮಾತುಗಳು ಕೇಳಿ ಬರುತ್ತಿವೆ.. ಅದಕ್ಕೆ ಕಾರಣ ಏನ್ ಗೊತ್ತಾ..? ಹಾಲಿವುಡ್ ನಟಿ ಹಾಗೂ ಹಾಡುಗಾರ್ತಿ ಸೆಲೆನಾ ಗೊಮೆಜ್ ಇದೀಗ ಸುದ್ದಿಗೆ ಬಂದಿದ್ದಾಳೆ.

ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಸೆಲೆನಾಳ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೇಳೆ ಸೆಲೆನಾ ಮಹತ್ವದ ವಿಷಯವೊಂದನ್ನು ಬಹಿರಂಗಪಡಿಸಿದ್ದಾಳೆ. 68 ವರ್ಷದ ನಟ ಹಾಗೂ ಸಹನಟ ಬಿಲ್ ಮುರ್ರೆ ಜೊತೆ ಮದುವೆಯಾಗುವುದಾಗಿ ತಿಳಿಸಿದ್ದಾಳೆ. ಸೆಲೆನಾ ಫೋಸ್ಟ್ ನೋಡ್ತಿದ್ದಂತೆ ಅಭಿಮಾನಿಗಳು ಶಾಕ್  ಒಂದೊಂದೇ ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ. ಆದ್ರೆ ಸೆಲೆನಾ ಫೋಸ್ಟ್ ಸರಿಯಾಗಿ ಓದಿದ್ರೆ ಸೆಲೆನಾ ಮಾಡಿದ್ದು ತಮಾಷೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಸೆಲೆನಾ, ಬಿಲ್ ಮುರ್ರೆ ಜೊತೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾಳೆ. ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕೂಡ ಇಬ್ಬರು ಪಾಲ್ಗೊಂಡಿದ್ದರು.. ಕೇನ್ಸ್ ಚಲನಚಿತ್ರೋತ್ಸವದಲ್ಲಿ ನನಗೆ ಖುಷಿ ತಂದಿದೆ ಎಂದು ಸೆಲೆನಾ ತಿಳಿಸಿದ್ದಾರೆ.. ಬಿಲ್ ಮುರ್ರೆಯವರನ್ನು ಮದುವೆಯಾಗುತ್ತಿದ್ದೇನೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದನ್ನ ನೋಡಿ ಅಭಿಮಾನಿಗಳು ಸ್ವಲ್ಪ ಮಟ್ಟಿಗೆ ಕೂಲ್ ಆಗಿದ್ದಾರೆ.

Edited By

Manjula M

Reported By

Manjula M

Comments