ಕಿರುತೆರೆ ನಟನಿಂದ ಚಾಕು ತೋರಿಸಿ ಯುವತಿ ಮೇಲೆ ಅತ್ಯಾಚಾರ..!!

20 May 2019 1:10 PM | Entertainment
605 Report

ಇತ್ತಿಚಿಗೆ ನಟ ನಟಿಯರ ವಿರುದ್ದ ದೂರುಗಳು ಹೆಚ್ಚಾಗಿ ದಾಖಲಾಗುತ್ತಿವೆ… ಇದೀಗ ಮತ್ತೊಬ್ಬ ನಟನ ವಿರುದ್ದ ದೂರು ದಾಖಲಾಗಿದೆ.. ಇದೀಗ ನಟನೊಬ್ಬ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.. ಯುವತಿಯೊಬ್ಬಳಿಗೆ ಚಾಕು ತೋರಿಸಿ ಕಿರುತೆರೆ ನಟ ಹಾಗೂ ಆತನ ಸ್ನೇಹಿತರಿಬ್ಬರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ…

ಯುವತಿಯೊಬ್ಬಳಿಗೆ ಚಾಕು ತೋರಿಸಿ ನಟ ರಾಕೇಶ್, ಹಾಗೂ ಸ್ನೇಹಿತರಾದ ಮಣಿ, ಸೂರ್ಯ ಅತ್ಯಾಚಾರ ಎಸಗಿದ ಆರೋಪಿಗಳಾಗಿದ್ದಾರೆ. ಮಣಿಪುರಿ ಮೂಲದ ಯುವತಿ ಕೆಂಗೇರಿಯ ಕಾಲೇಜಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದು, ಮತ್ತೊಬ್ಬಳು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು..  ಇಬ್ಬರು ಕೂಡ ಕೋರಮಂಗಲದ ಅಪಾರ್ಟ್‌ ಮೆಂಟ್‌ ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರಿಂದ ಪರಿಚಯದವರಾಗಿದ್ದರು. ಆದರೆ ಮೇ 12 ರಂದು ನಟ ರಾಕೇಶ್, ಆತನ ಸ್ನೇಹಿತರು ಯುವತಿಯ ಅಪಾರ್ಟ್‌ಮೆಂಟ್‌ ಗೆ ನುಗ್ಗಿ ಚಾಕು ತೋರಿಸಿ ಅತ್ಯಾಚಾರ ಮಾಡಿದ್ದಾರೆ.. ಈ ಅತ್ಯಾಚಾರದ ಬಗ್ಗೆ ಯುವತಿಯರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಹೆಣ್ಣು ಮಕ್ಕಳು ಒಂಟಿಯಾಗಿ ಎಲ್ಲಿಯೂ ಕೂಡ ಇರಲು ಹೋಗಲು ಸಾಧ್ಯವಾಗುತ್ತಿಲ್ಲ.. ದಿನದಿಂದ ದಿನಕ್ಕೆ ಅತ್ಯಾಚಾರದ ಪ್ರಕರಣಗಳು ಜಾಸ್ತಿಯಾಗುತ್ತಿವೆ… ಇದಕ್ಕೆಲ್ಲಾ ಮುಕ್ತಿ ಯಾವಾಗ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

Edited By

Manjula M

Reported By

Manjula M

Comments