ಸ್ಯಾಂಡಲ್ ವುಡ್ ಈ ಹೀರೋ ಜೊತೆ ಭಿಕ್ಷುಕನ ಪಾತ್ರವಾದ್ರೂ ಮಾಡ್ತೀನಿ ಅಂದಿದ್ರಂತೆ ರಜಿನಿಕಾಂತ್..!! ಯಾರ್ ಆ ಹೀರೋ..?

20 May 2019 11:57 AM | Entertainment
7819 Report

ರೆಬಲ್ ಸ್ಟಾರ್ ಅಂಬರೀಶ್  ಮಗ ಯಂಗ್ ರೆಬಲ್ ಸ್ಟಾರ್ .. ಮೊದಲ ಸಿನಿಮಾದ ಚಿತ್ರಿಕರಣ ಮುಗಿಸಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ.. ಅಮರ್ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿದ್ದು ಸಿನಿಮಾ ಇದೇ ತಿಂಗಳು 31 ಕ್ಕೆ ಬಿಡುಗಡೆಯಾಗಲಿದೆ… ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟನೆಯ ಚೊಚ್ಚಲ ಸಿನಿಮಾ ‘ಅಮರ್’ ಚಿತ್ರ ತೆರೆ ಮೇಲೆ ಬರೋದಿಕ್ಕೆ ಇನ್ನೂ ಕೆಲವೇ ದಿನಗಳು ಬಾಕಿಯಿವೆ. ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ  ಅಮರ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ..

ಈ ಸಮಯದಲ್ಲಿ ಮಾತನಾಡಿದ ಅಮರ್ ಸಿನಿಮಾದ ನಾಯಕ ಅಭಿಷೇಕ್ ನನಗೆ ಸಿನಿಮಾ ಮಾಡುವ ಮೊದಲು ತುಂಬಾ ವೀಕ್ನೆಸ್ ಗಳು ಇದ್ದವು… ಸಿನಿಮಾ ಶುರು ಮಾಡುವ ಸಂದರ್ಭದಲ್ಲಿ ಎಲ್ಲವನ್ನೂ ಕೂಡ ಬದಲಾಯಿಸಿಕೊಂಡಿದ್ದೇನೆ ಎಂದರು. ತಪ್ಪುಗಳನ್ನು ತಿದ್ದಿ ನಿರ್ದೇಶಕರು ಸರಿಯಾಗಿ ನಟಿಸುವಂತೆ ಮಾಡಿದ್ದಾರೆ ವಿಶೇಷ ಅಂದ್ರೆ ನಮ್ಮ ತಂದೆಯ ಪ್ರೀತಿಯಿಂದಾಗಿ ಚಿತ್ರದಲ್ಲಿ ರಜಿನಿಕಾಂತ್, ಮೋಹನ್ ಬಾಬು, ಶತ್ರುಘ್ನ ಸಿನ್ಹಾ ಕೂಡ ಅಭಿನಯಿಸೋದಾಗಿ ಹೇಳಿದ್ದರಂತೆ.. ರಜಿನಿಕಾಂತ್ ಸರ್ ಭಿಕ್ಷುಕನ ಪಾತ್ರವಾದ್ರೂ ಸೈ ನಾನು ನಟಿಸ್ತಿನಿ ಅಂತಾ ಹೇಳಿದ್ದರಂತೆ. ಮತ್ತೊಂದು ವಿಶೇಷ ಅಂದರೆ ಅಪ್ಪ ನನ್ನ ಫಸ್ಟ್ ಹಾಫ್ ನೋಡಿ ನೀನು ಬದುಕೋತಿಯಾ ಬಿಡ್ಲಾ ಅಂತಾ ಹೇಳಿದ್ದರಂತೆ.. ಇವನ್ನೆಲ್ಲಾ ನೆನೆದು ಅಭಿ ಸ್ವಲ್ಪ ಮಟ್ಟಿಗೆ ಭಾವುಕರಾದರು.. ಅಂದಹಾಗೆ ಅಮರ್ ಸಿನಿಮಾ ಇದೆ ತಿಂಗಳು 31 ಕ್ಕೆ ಬಿಡುಗಡೆಯಾಗಲಿದ್ದು ತಾನ್ಯಾಹೋಪ್ ನಾಯಕಿಯಾಗಿ ಸ್ಕ್ರೀನ್ ಷೇರ್ ಮಾಡಿದ್ದಾರೆ.

Edited By

Manjula M

Reported By

Manjula M

Comments