ಚಿತ್ರಿಕರಣದಿಂದ ಬ್ರೇಕ್ ತೆಗೆದುಕೊಂಡ ಕಿಚ್ಚ ಸುದೀಪ್..!! ಕಾರಣ ಮಗಳಾ..!?

20 May 2019 10:14 AM | Entertainment
1845 Report

ಸ್ಯಾಂಡಲ್ ವುಡ್ ನಲ್ಲಿ  ಬಹು ಬೇಡಿಕೆಯ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು.. ಯಾವಾಗಲೂ ಕೂಡ ಶೂಟಿಂಗ್ ಸಿನಿಮಾ ಅಂತಾಲೇ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಡುತ್ತಾರೆ.. ಅಭಿಮಾನಿಗಳಿಗಂತೂ ಕಿಚ್ಚ ಹುಚ್ಚಿಡಿಸಿದಂತೂ ಸುಳ್ಳಲ್ಲ… ಅಭಿಮಾನಿಗಳಿಗೆ ಸುದೀಪ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ… ಯಾವಾಗಲೂ ಬ್ಯುಸಿಯಿರುವ ಸುದೀಪ್ ಇದೀಗ ಸಣ್ಣ ವಿರಾಮ ತೆಗೆದುಕೊಂಡಿದ್ದಾರೆ.

ಸದ್ಯ ಕಿಚ್ಚ ಸುದೀಪ್ ದಬಾಂಗ್ 3 ಶೂಟಿಂಗ್ ಮುಗಿಸಿ ಇದೀಗ ಕೋಟಿಗೊಬ್ಬ 3 ಸಿನಿಮಾ ಚಿತ್ರೀಕರಣಕ್ಕೆ ಸಿದ್ದವಾಗುತ್ತಿದ್ದಾರೆ.. ಇದೆಲ್ಲದರ ಮಧ್ಯೆ ಸುದೀಪ್ ಶೂಟಿಂಗ್ ನ ನಡುವೆ ಸಣ್ಣದೊಂದು ವಿರಾಮವನ್ನು  ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಸುದೀಪ್ ಮುದ್ದಿನ ಮಗಳು. ಸುದೀಪ್ ಗೆ ಮಗಳು ಎಂದರೆ ಎಷ್ಟು ಇಷ್ಟ ಅನ್ನೋದು ಎಲ್ಲರಿಗೂ ಕೂಡ ಗೊತ್ತಿರುವ ವಿಷಯ. ಇದೀಗ ಪುತ್ರಿಯ ಜನ್ಮದಿನ ಆಚರಣೆಗಾಗಿ ಸುದೀಪ್ ಶೂಟಿಂಗ್ ಗೆ ಸಣ್ಣದೊಂದು ವಿರಾಮ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ… ಒಟ್ಟಾರೆಯಾಗಿ ಶೂಟಿಂಗ್ ಗೆ ಬ್ರೇಕ್ ಹಾಕಿ ಮುದ್ದಿನ ಮಗಳ ಬರ್ತಡೇ ಖುಷಿಯಲ್ಲಿದ್ದಾರೆ ಕಿಚ್ಚ ಸುದೀಪ್.. ಮಗಳ ಬರ್ತಡೇ ಮುಗಿಸಿ ಮತ್ತೆ ಶೂಟಿಂಗ್ ಹಾಜರ್ ಆಗುತ್ತಾರೆ. ಸದ್ಯ ಸುದೀಪ್ ಅಭಿನಯದ ಪೈಲ್ವಾನ ಸಿನಿಮಾ ಬಿಡಿಗಡೆಗೆ ಸಿದ್ದವಾಗಿದ್ದು, ಅಭಿಮಾನಿಗಳು ಪೈಲ್ವಾನ್ ನನ್ನು ಕಣ್ಣು ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments