ಕಂಠಪೂರ್ತಿ ಕುಡಿದು ಕಾರು ಚಲಾಯಿಸಿ ಪೊಲೀಸಪ್ಪನ ಕೈಗೆ ರೆಡ್ಹ್ಯಾಡ್  ಆಗಿ ಸಿಕ್ಕಿ ಬಿದ್ದ ನಟಿ..!!

17 May 2019 4:38 PM | Entertainment
987 Report

ಗಾಂಧಿನಗರಕ್ಕೂ ಎಂಟ್ರಿ ಕೊಡದೇ ಏಕಾಏಕಿ ಟಾಲಿವುಡ್ ಗೆ ಎಂಟ್ರಿ ಕೊಟ್ಟಿರೋ ಅಲ್ಲಿ ಕಮಾಲು ಮಾಡ್ತಿರೋ ಕರಾವಳಿ ಸುಂದರಿ ಎಂದರೆ ಅದು ಪೂಜಾ ಹೆಗ್ಡೆ.. ಪೂಜಾ ಪದೇ ಪದೇ ಒಂದಲ್ಲ ಒಂದು ವಿಷಯಕ್ಕಾಗಿ ಸಖತ್ ಸೌಂಡ್ ಮಾಡ್ತಿದ್ದಾಳೆ. ಮುತ್ತಿನನಗರಿಯಲ್ಲಿ ಕಂಠಪೂರ್ತಿ ಕುಡಿದು ಪೊಲೀಸರ ಕೈಗೆ ಸಿಕ್ಕಿಗಾಗಿ  ಕೊಂಡಿದ್ದಾಳೆ… ಕನ್ನಡದವರೇ ಆದ ಪೂಜಾ ಹೆಗ್ಡೆ ಎಲ್ಲರಿಗೂ ಚಿರ ಪರಿಚಿತವಾದದ್ದು ಕಾಲಿವುಡ್ ಅಂಗಳದಿಂದ. ಮುಗಮೋದಿ ಅನ್ನೋ ತಮಿಳು ಸಿನಿಮಾದ ಮೂಲಕ ಪರಿಚಯವಾದ ಪೂಜಾ ಈಗ ಕಮಾಲ್ ಮಾಡ್ತಿರೋದು ಮಾತ್ರ ಟಾಲಿವುಡ್​ ಅಂಗಳದಲ್ಲಿ. ಸದ್ಯ ಟಾಲಿವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಪೂಜಾ ಬ್ಯುಸಿಯಾಗಿದ್ದಾರೆ.

ಹೀಗೆ ಒಂದರ ನಂತರ ಒಂದು ಸಿನಿಮಾ ಮಾಡಿ  ಸಕ್ಸಸ್ ಕಾಣ್ತಿರೋ ಈ ಬೆಡಗಿ  ಟಿಟೌನ್​ನಲ್ಲಿ ಸದ್ದು ಮಾಡ್ತಾನೆ ಇರ್ತಾರೆ. ಇತ್ತೀಚೆಗೆ ಬಿಕಿನಿ ತೊಟ್ಟು ಹಾಟ್ ಫೋಸ್ ಕೊಟ್ಟಿದ್ದ ಪೂಜಾ ಈಗ ಹೈದ್ರಾಬಾದ್​ನಲ್ಲಿ ಕಂಠ ಪೂರ್ತಿ ಕುಡಿದು ಕಾರ್ ಡ್ರೈವ್ ಮಾಡಿ ಪೊಲೀಸಪ್ಪನ ಕೈ ಗೆ ತಗಲಿಹಾಕಿಕೊಂಡಿದ್ದಾಳೆ.

ಪೂಜಾಹೆಗ್ಡೆ ಕಂಠಪೂರ್ತಿ ಕುಡಿದಿದ್ದು ಮಹರ್ಷಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ. ಮಹೇಶ್ ಬಾಬು ಮತ್ತು ಪೂಜಾ ಹೆಗ್ಡೆ ಅಭಿನಯದ ಈ ಚಿತ್ರದ ಫ್ರೀ ರಿಲೀಸ್ ಕಾರ್ಯಕ್ರಮವನ್ನ ಹೈದ್ರಾಬಾದ್​ನಲ್ಲಿ ಹಮ್ಮಿಕೊಳ್ಳಾಗಿತ್ತು. ಈ ವೇಳೆ ಕಾರ್ಯಕ್ರಮ ಮುಗಿಸಿ ರಿರ್ಟನ್ ಆಗುವಾಗ ಡ್ರಿಕ್ಸ್ ಮಾಡಿ ಕಾರು ಚಲಾಯಿಸಿದ್ದಾರೆ ಪೂಜಾ ಹೆಗ್ಡೆ.  ಪೂಜಾ ಪೊಲೀಸರಿಗೆ ಸಿಕ್ಕಿಬೀಳ್ತಿದ್ದಂತೆ ಅವರ ಮ್ಯಾನೇಜರ್ ಹಾಗೂ ಕಾರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರಂತೆ. ತಕ್ಷಣ ಮ್ಯಾನೇಜರ್ ಪೂಜಾ ಹೆಗ್ಡೆಯನ್ನ ಬೇರೆ ಕಾರಿನಲ್ಲಿ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ... ಆದ್ರೆ ಇದೆಲ್ಲಾ ನಾನ್​ಸೆನ್ಸ್ ಸುಳ್ಳು ಅಂತಾ ಪೂಜಾ ಮ್ಯಾನೇಜರ್ ಕಡ್ಡಿ ಮುರಿದಂಗೆ ಹೇಳ್ತಿದ್ದಾರೆ. ಆದ್ರೆ ಈ ಬಗ್ಗೆ ಪೂಜಾ ಹೆಗ್ಡೆ  ಮಾತ್ರ ಮೌನ ಮುರಿದಿಲ್ಲ…ಒಟ್ಟಾರೆಯಾಗಿ ಸೆಲೆಬ್ರೆಟಿಗಳು ಕುಡಿದು ಹೀಗೆ ರಸ್ತೆ ಮಧ್ಯೆಯಲ್ಲಿ ಕಾರು ಚಲಾಯಿಸದ್ದರೆ ಇನ್ನೂ ಸಾಮಾನ್ಯರು ಕೇಳಬೇಕಾ ನೀವೆ ಹೇಳಿ..!!

Edited By

Manjula M

Reported By

Manjula M

Comments

Cancel
Done