ಸ್ಯಾಂಡಲ್’ವುಡ್ ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಅಳಿಯ..

17 May 2019 3:14 PM | Entertainment
305 Report

ಸ್ಯಾಂಡಲ್’ವುಡ್ ಗೆ ಹೊಸಬರ ಆಗಮನ ಹೊಸದೇನಲ್ಲ…ಪ್ರತಿ ಬಾರಿಯೂ ಹೊಸ ಪ್ರತಿಭೆಗಳು ಸ್ಯಾಂಡಲ್ ವುಡ್ ಗೆ ಅನಾವರಣಗೊಳ್ಳುತ್ತಿರುತ್ತವೆ.. ಈಗಾಗಲೇ ಸ್ಯಾಂಡಲ್ ವುಡ್ ಅನ್ನು ಆಳುತ್ತಿರುವ ನಟ ನಟಿ ಮಕ್ಕಳು, ಬಂಧುಗಳು ಸಿನಿಮಾ ಗೆ ಎಂಟ್ರಿಕೊಡುವುದು ಕಾಮನ್ ಆಗಿ ಬಿಟ್ಟಿದೆ.. ಇದೀಗ ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಕೇಳಿ ಬಂದಿದೆ. 

ಇದೀಗ ಸುದೀಪ್ ಅಳಿಯ ಸಂಚಿತ್ ಈಗಾಗಲೇ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ ಮುಂಬೈನಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ನನ್ನ ಕೈಲಾಗದ ನೃತ್ಯವನ್ನು ನನ್ನ ಅಳಿಯನಾದರೂ ಗಂಭೀರವಾಗಿ ತೆಗೆದುಕೊಂಡು ಪ್ರಾಕ್ಟೀಸ್ ಮಾಡುತ್ತಿದ್ದಾನೆ. ಅವನಿಗೆ ಯಶಸ್ಸು ಸಿಗಲಿ ಎಂದು ಸುದೀಪ್ ಹಾರೈಸಿದ್ದಾರೆ. ಆದರೆ ಯಾವ ಸಿನಿಮಾ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿಲ್ಲ.. ಅದರ ಬಗ್ಗೆ ಆದಷ್ಟು ಬೇಗ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

Edited By

Manjula M

Reported By

Manjula M

Comments