ಅಂತೂ ಇಂತೂ ಹನುಮಂತನ ಬಯೋಪಿಕ್ ಸಿನಿಮಾ ತೆರೆಮೇಲೆ..!! ಹೀರೋ ಯಾರು ಗೊತ್ತಾ..?

16 May 2019 3:57 PM | Entertainment
550 Report

ಹನುಮಂತ… ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಕೂಡ ಅರ್ಥವಾಗಿ ಬಿಡುತ್ತದೆ..ನಾವು ಯಾರ ಬಗ್ಗೆ ಹೇಳಲು ಹೊರಟಿದ್ದೇವೆ ಎಂಬುದು… ತಮ್ಮದೇ ಆದ ಗ್ರಾಮೀಣ ಶೈಲಿಯಲ್ಲಿ ಹಾಡುವ ಮೂಲಕ ಅಭಿಮಾನಿಗಳ ಹೃದಯ ಕದ್ದಿರುವ ಸರಿಗಮಪ ದ ಸಿಂಗರ್ ಹನುಮಂತ… ಇದೀಗ ಹನುಮಂತನ ಅಭಿಮಾನಿಗಳು ಗುಡ್ ನ್ಯೂಸ್ ಸಿಕ್ಕಿದೆ.. ಅರೇ ಹೌದಾ.. ಏನಪ್ಪಾ ಅಂತೀರಾ… ಕುರಿಗಾಹಿ ಹನುಮಂತನ ಜೀವನ ಇದೀಗ ತೆರೆ ಮೇಲೆ ಬರಲು ಸಿದ್ದವಾಗುತ್ತಿದೆ.

ಹೌದು… ಕುರಿಗಾಹಿ ಹನುಮಂತನ ಜೀವನ ಕಥೆ ಸಿನಿಮಾವಾಗುತ್ತಿದೆ..  ಉಡುಪಿ ಜಿಲ್ಲೆಯ ಕುಂದಾಪುರದ ಸಂದೇಶ್ ಶೆಟ್ಟಿ ಅವರು ಹನುಮಂತನ ಜೀವನಾಧಾರಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.. 'ಕತ್ತಲೆಕೋಣೆ' ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ  ಸಂದೇಶ್ ಶೆಟ್ಟಿ ಕುರಿಗಾಯಿ ಹನುಮಂತನ ಜೀವನಾಧಾರಿತ ಕಥೆ ಸಿದ್ಧಪಡಿಸುತ್ತಿದ್ದಾರೆ. ಈಗಾಗಲೇ ಹನುಮಂತ ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚೆ ಮಾಡಿದ್ದು  ಗ್ರೀನ್ ಸಿಗ್ನಲ್ ಸಿಕ್ಕಿದೆ. ಸುಮಾರು 1.500 ಕೋಟಿ ರೂ. ಬಜೆಟ್ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.. ಮಳೆಗಾಲ ಮುಗಿದ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.  ಹನುಮಂತನ ಜೀವನಾಧಾರಿತ ಚಿತ್ರಕ್ಕೆ ಇನ್ನೂ ಟೈಟಲ್ ಪಕ್ಕಾ ಆಗಿಲ್ಲ...ಪ್ರವೀಣ್ ಮತ್ತು ಪವಿತ್ರಾ ದಂಪತಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಒಟ್ಟಿನಲ್ಲಿ ಕುರಿ ಮೇಯಿಸಿಕೊಂಡು ಎಲ್ಲೋ ಇದ್ದ ಹನುಮಂತಪ್ಪ ದಿಢಿರ್ ಅಂತ ಸೆಲೆಬ್ರೆಟಿ ಆಗಿದ್ದಂತೂ ಸುಳ್ಳಲ್ಲ.. ಅದಕ್ಕೆ ಅದೃಷ್ಟ ಅನ್ನೋದು ಇರಬೇಕು ಅನ್ನೋದು….

 

Edited By

Manjula M

Reported By

Manjula M

Comments