ಗಾಸಿಪ್’ಗಳಿಗೆ ತೆರೆ ಎಳೆದ ಬಿಟೌನ್ ಸುಂದರಿ..! 

15 May 2019 3:28 PM | Entertainment
207 Report

ವಿರುಷ್ಕಾ ದಂಪತಿಗಳು ಮದುವೆಯಾದಾಗ ಇವರಿಬ್ಬರ ಜೋಡಿ ನೋಡಿ ಎಲ್ಲರೂ ಮೇಡ್ ಫಾರ್ ಈಚ್ ಅಂದ್ರು… ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲವಂತೆ.. ಇದಕ್ಕೆ ಕಾರಣವೇನಿರಬಹುದು ಎಂದು ಹಲವು ಊಹಾಪೋಹಗಳು ಹಬ್ಬಿದ್ದವು. ಆದರೆ ಇದೀಗ ಅನುಷ್ಕಾ ತಾವು ಸಿನಿಮಾದಿಂದ ಕಾಣೆಯಾಗುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ತಿಳಿಸಿದ್ದಾರೆ.

ಇದೀಗ ಅನುಷ್ಕಾ ತಾವು ಸಿನಿಮಾದಿಂದ ಕಾಣೆಯಾಗುತ್ತಿರುವುದಕ್ಕೆ ಕಾರಣವೇನೆಂದು ತಿಳಿಸಿದ್ದಾರೆ. ಈ ಮೂಲಕ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ. ಒಂದೇ ವರ್ಷದಲ್ಲಿ ಕಠಿಣ ಪರಿಶ್ರಮ ಪಡಬೇಕಾದ ಹಲವು ಸಿನಿಮಾಗಳನ್ನು ಮಾಡಿದೆ. ತುಂಬಾ ಬ್ಯುಸಿಯಾಗಿದ್ದೆ. ಈಗ ನಾನು ನಟಿಯಾಗಿ ಒಂದು ಒಳ್ಳೆಯ ಸ್ಥಾನಕ್ಕೆ ತಲುಪಿದ್ದೇನೆ. ಈಗಲೂ ನಾನು ಕಂಡ ಕಂಡ ಸಿನಿಮಾಗಳನ್ನೆಲ್ಲಾ ಒಪ್ಪಿಕೊಳ್ಳಬೇಕೆಂದಿಲ್ಲ. ಹೀಗಾಗಿ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ. ಸದ್ಯ ಅನುಷ್ಕಾ ತಮ್ಮ ದಾಂಪತ್ಯ ಜೀವನದಲ್ಲಿ ಬ್ಯುಸಿಯಾಗಿದ್ದಾರೆ… ಸೂಯಿಧಾಗ್, ಝೀರೋ, ಪರಿ ಚಿತ್ರದ ಬಳಿಕ ನಟಿ ಅನುಷ್ಕಾ ಶರ್ಮಾ ಬಾಲಿವುಡ್‍ ನಿಂದ ದೂರ ಉಳಿದ್ದರು. ಇದಕ್ಕೆ ಕಾರಣ ಅನುಷ್ಕಾ ಪ್ರಗ್ನೆಂಟ್ ಎಂಬ ಸುದ್ದಿ ಕೂಡಾ ಹಬ್ಬಿತ್ತು. ಸ ಇದಕ್ಕೆಲ್ಲಾ ಅನುಷ್ಕಾ ಇದೀಗ ತೆರೆ ಎಳೆದಿದ್ದಾರೆ.

Edited By

Manjula M

Reported By

Manjula M

Comments