ಬ್ರಹ್ಮಚಾರಿ ಅಡ್ಡಾಗೆ ಎಂಟ್ರಿ ಕೊಟ್ಟ ಜೂನಿಯರ್ ರಾಕಿಬಾಯ್..!!

11 May 2019 10:33 AM | Entertainment
410 Report

ಸ್ಯಾಂಡಲ್ ವುಡ್ ನ ಕೆಜಿಎಫ್ ಸಿನಿಮಾಅಂದ್ರೆ ಒಂದಷ್ಟು ಪಾತ್ರಗಳು ಮನಸ್ಸಿನಲ್ಲಿ ಹಾಗೇಯೇ ಅಚ್ಚುಳಿದು ಬಿಡುತ್ತವೆ… ಅದರಲ್ಲಿ ಜೂನಿಯರ್ ರಾಕಿ  ಪಾತ್ರವು ಕೂಡ ಒಂದು..  ಪುಟ್ಟ ವಯಸ್ಸಿನಲ್ಲಿಯೇ ಅಭೂತ ಪೂರ್ವ ನಟನೆಯಿಂದ ನೋಡುಗರ ಮನಸ್ಸುನ್ನು ಕದ್ದಿದ್ದ ಹುಡುಗ.. ಆತನ ಹೆಸರು ಅನ್ಮೋಲ್… ಚಿಕ್ಕ ವಯಸ್ಸಿನಲ್ಲಿಯೇ ಎಂತಹ ನಟನೆಯಪ್ಪಾ ಎಂದು ನೋಡುಗರು ತಬ್ಬಿಬ್ಬು ಆಗಿದ್ದಂತೂ ಸತ್ಯ.. ಅಷ್ಟರ ಮಟ್ಟಿಗೆ ಅಭಿನಯಿಸಿದ್ದಾನೆ ಅನ್ಮೋಲ್…  ಆ ನಟನೆಯಿಂದಲೇ ಈಗ ಸಾಕಷ್ಟು ಅವಕಾಶಗಳು ಆತನನ್ನು ಅರಸಿಕೊಂಡು ಬಂದಿವೆ..

ಎಸ್.. ಸದ್ಯಕ್ಕೆ ಅನ್ಮೋಲ್ ಬ್ರಹ್ಮಚಾರಿಯ ಗೆಟಪ್ಪಿನಲ್ಲಿರೋ ನೀನಾಸಂ ಸತೀಶ್ ಅವರ ಜೊತೆ ನಟಿಸೋ ಮೂಲಕ ಸುದ್ದಿ ಸುದ್ದಿಯಲ್ಲಿದ್ದಾನೆ. ನೀನಾಸಂ ಸತೀಶ್ ನಾಯಕನಾಗಿರೋ ಬ್ರಹ್ಮಚಾರಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸೆಟ್‍ನಲ್ಲಿ ಅನ್ಮೋಲ್ ಜೊತೆಗಿರೋ ಫೋಟೋವೊಂದನ್ನು ಸತೀಶ್ ನೀನಾಸಂ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅನ್ಮೋಲ್ ಪಾತ್ರ ಹೇಗಿದೆ? ಇಲ್ಲಿಯೂ ಸತೀಶ್ ಅವರ ಜ್ಯೂನಿಯರ್ ಶೇಡಿನ ಪಾತ್ರವನ್ನೇನಾದರೂ ಆತ ಮಾಡಿದ್ದಾನಾ ಎಂಬುದೂ ಸೇರಿದಂತೆ ಯಾವ ವಿಚಾರವನ್ನೂ ಸತೀಶ್ ಅವರಾಗಲಿ, ಚಿತ್ರತಂಡವಾಗಲಿ ಬಿಟ್ಟು ಕೊಟ್ಟಿಲ್ಲ. ಸದ್ಯ ಈ ಸಿನಿಮಾದ ಮೂಲಕವು ಕೂಡ ಅನ್ಮೋಲ್ ಮತ್ತೆ ಕಮಾಲು ಮಾಡಲು ಸಿದ್ದನಾಗುತ್ತಿದ್ದಾನೆ.. ಅಯೋಗ್ಯ ಸಿನಿಮಾದ ರೀತಿಯಲ್ಲಿಯೇ ಈ ಸಿನಿಮಾವು ಕೂಡ ಸತೀಶ್ ಗೆ ಒಳ್ಳೆಯ ಯಶಸ್ಸನ್ನು ತಂದುಕೊಡಲಿ.

 

 

Edited By

Manjula M

Reported By

Manjula M

Comments