ತನ್ನ ಸೌಂದರ್ಯವೇ ಮುಳುವಾಯಿತೇ ಈ ನಟಿಗೆ..?

11 May 2019 9:49 AM | Entertainment
748 Report

ಹೆಣ್ಣು ಮಕ್ಕಳಿಗೆ ಅವರು ಎಷ್ಟೆ ಚೆನ್ನಾಗಿದ್ದರೂ ಇನ್ನೂ ಚೆನ್ನಾಗಿ ಇರ್ಬೇಕಿತ್ತು ಅಂತ ಆಸೆ ಪಡ್ತಾರೆ… ಇರೋ ಸೌಂದರ್ಯದ ಜೊತೆಗೆ ಮತ್ತಷ್ಟು ಚೆನ್ನಾಗಿ ಕಾಣಿಸಬೇಕು ಅಂತಾ ಆ ಕ್ರೀಮ್, ಈ ಕ್ರೀಮ್ , ಪೇಸ್ ಪ್ಯಾಕ್, ಫೇಸ್ ಕ್ರೀಂಗಳನ್ನು  ಹಚ್ಚಿಕೊಳ್ಳುತ್ತಿರುತ್ತಾರೆ.. ಆದರೆ ಈ ನಟಿಗೆ ಅವಳು ಹೆಚ್ಚು ಸುಂದರವಾಗಿರುವುದೇ ದೊಡ್ಡ ಅಪರಾಧವಾಗಿದೆ..

ಎಸ್.. ಕಾಂಬೋಡಿಯನ್ ನಟಿ ಡೆನಿ ನಾನ್(26) ಎಂಬಾಕೆಗೆ ಅಗತ್ಯಕ್ಕಿಂತ ಹೆಚ್ಚು ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ಅಲ್ಲಿನ ಸರ್ಕಾರ ಒಂದು ವರ್ಷದ ನಿಷೇಧ ಹೇರುವುದರ ಮೂಲಕ ಆ ನಟಿಗೆ ಶಿಕ್ಷೆ ವಿಧಿಸಿದೆ. ಈ ವಿಷಯದ ಬಗ್ಗೆ ಕಾಂಬೋಡಿಯನ್ ಸಂಸ್ಕೃತಿ ಮತ್ತು ಕಲೆ ಸಚಿವಾಲಯ ತಿಳಿಸಿದೆ. ಡೆನ್ನಿನಾನ್ ನಟಿಯ ಫೋಟೋಗಳು ದೇಶದ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತವೆಯಂತೆ ಅಷ್ಟೆ ಅಲ್ಲದೆ ಡೆನ್ನಿ ನಾನ್ ಫೇಸ್ಬುಕ್ ಪೇಜ್ ಹೊಂದಿದ್ದು, ಅದ್ರಲ್ಲಿ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ನಿಷೇಧಕ್ಕೊಳಗಾಗುವಂತಹ ಯಾವುದೇ ಕೆಲಸವನ್ನು ನಾನು  ಮಾಡಿಲ್ಲವೆಂದು ಡೆನ್ನಿ ನಾನ್ ತಿಳಿಸಿದ್ದಾರೆ.. ಹುಡುಗಿಯರು ಹೇಗಿದ್ದರೂ ಕಷ್ಟ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ ಎನ್ನಬಹುದು.

Edited By

Manjula M

Reported By

Manjula M

Comments